ADVERTISEMENT

ಅಕ್ರಮ ಮರಳುಗಾರಿಕೆ: ಗಣಿ ಇಲಾಖೆ ಮೌನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 8:35 IST
Last Updated 19 ಮಾರ್ಚ್ 2012, 8:35 IST

ಬ್ರಹ್ಮಾವರ: ಹಂದಾಡಿ ಗ್ರಾ. ಪಂ ವ್ಯಾಪ್ತಿಯ ಮಾಬುಕಳ ಸೇತುವೆ ಬಳಿಯಲ್ಲಿ ಹೊಳೆಯ ಬದಿಯಲ್ಲಿ ರಸ್ತೆ ನಿರ್ಮಿಸಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ಮಾಡುತ್ತಿದ್ದರೂ ಗಣಿ ಇಲಾಖೆ ಮೌನ ವಹಿಸಿದೆ.

ಹಂದಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಜಾಗದಲ್ಲಿ ಹೊಳೆಯ ಬದಿಯಲ್ಲಿ ಪಂಚಾಯಿತಿಯ ಅನುಮತಿ ಪಡೆಯದೇ ಮಣ್ಣನ್ನು ಹಾಕಿ ರಸ್ತೆ ನಿರ್ಮಿಸಿ ಮರಳುಗಾರಿಕೆ ಮಾಡಲಾಗು ತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರ ಸಮೀಪವೇ ಹೊಳೆಗೆ ಮಣ್ಣು ಹಾಕಿ ರಸ್ತೆ ನಿರ್ಮಾಣ ಮಾಡಿದ್ದರೂ ಅದನ್ನು ಗಣಿಗಾರಿಕೆ ಇಲಾಖೆಯಾಗಲೀ, ಪಂಚಾ ಯಿತಿ ಸಿಬ್ಬಂದಿಯಾಗಲೀ ಇದುವರೆಗೆ ಪ್ರಶ್ನಿಸಿಲ್ಲ.

ಹಲವಾರು ವರ್ಷಗಳಿಂದ ಮಾಬುಕಳ(ಐರೋಡಿ ಗ್ರಾ.ಪಂ. ವ್ಯಾಪ್ತಿ) ಬದಿಯಲ್ಲಿ ಮಾತ್ರ ಮರಳು ಗಾರಿಕೆಗೆ ಅನುಮತಿ ನೀಡಲಾಗಿತ್ತು. ಆದರೆ ಕಳೆದ ವರ್ಷದಿಂದ ಹಂದಾಡಿ ಗ್ರಾ.ಪಂ. ವ್ಯಾಪ್ತಿಯಲ್ಲೂ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ. ಎರಡೂ ಕಡೆಯಿಂದ ಮರಳುಗಾರಿಕೆ ನಡೆಯುವುದರಿಂದ ಭವಿಷ್ಯದಲ್ಲಿ ಮಾಬುಕಳ ಸೇತುವೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚು ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಅಕ್ರಮ ರಸ್ತೆ ನಿರ್ಮಾಣ ಮತ್ತು ಮರಳುಗಾರಿಕೆಯ ಬಗ್ಗೆ ಸಂಬಂಧಪಟ್ಟ ಇಲಾಖೆ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.