ADVERTISEMENT

ಉಡುಪಿ ಪರ್ಯಾಯ– ಹೊರೆಕಾಣಿಕೆ 7ರಿಂದ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:31 IST
Last Updated 7 ಜನವರಿ 2014, 6:31 IST

ಉಡುಪಿ: ಕಾಣಿಯೂರು ಪರ್ಯಾಯ ಮಹೋತ್ಸವ ಅಂಗವಾಗಿ ಜನವರಿ 7ರಿಂದ ಹೊರೆ ಕಾಣಿಕೆ ಸಲ್ಲಿಸಲಾ­ಗುವುದು. ಜನವರಿ 7ರಂದು ಇಸ್ಕಾನ್‌ ಸಂಸ್ಥೆ­ಯಿಂದ, ಜ.8ರಂದು ಪೆರಂಪಳ್ಳಿ, ಚಕ್ರತೀರ್ಥ, ದೊಡ್ಡಣಗುಡ್ಡೆ, ಕರಂಬಳ್ಳಿ ಭಾಗದ ಹೊರೆಕಾಣಿಕೆ ಜುಮಾದಿ ಕಟ್ಟೆಯಿಂದ ಹೊರಡಲಿದೆ. ಜ.12 ರಂದು ರಾಮಕ್ಷತ್ರಿಯ ಸಮಾಜ, ಗುಜ­ರಾತ್ ಸಮಾಜ, ರಾಜಸ್ತಾನಿ ಸಮಾಜ, ವಿಶ್ವಬ್ರಾಹ್ಮಣ ಸಮಾಜ, ವಿಶ್ವಕರ್ಮ ಒಕ್ಕೂಟ ದವರು ಗೋವಿಂದ ಕಲ್ಯಾಣ ಮಂಟಪದಿಂದ ಮೆರವಣಿಗೆ ಮೂಲಕ ತೆರಳಿ ಹೊರೆಕಾಣಿಕೆ ಸಲ್ಲಿಸುವರು.

ದೈವಜ್ಞ ಬ್ರಾಹ್ಮಣ ಸಮಾಜದವರು ದೈವಜ್ಞ ಬ್ರಾಹ್ಮಣ ಸಭಾಭವನದಿಂದ ಸಂಜೆ 5ಗಂಟೆಯಿಂದ ಮೆರವಣಿಗೆಯಲ್ಲಿ ಹೊರಟು ಹೊರೆಕಾಣಿಕೆ ಸಲ್ಲಿಸುವರು. ಜ.13ರಂದು ಕೆಮ್ತೂರು, ಅಲೆವೂರು, ಮಾರ್ಪಳ್ಳಿ ಭಾಗದ ಹೊರೆ ಕಾಣಿಕೆ ಮೆರವಣಿಗೆ ಗೋವಿಂದ ಕಲ್ಯಾಣ ಮಂಟಪದಿಂದ ಸಂಜೆ 3 ಗಂಟೆಗೆ ಹೊರಡಲಿದೆ. ಜ.14ರಂದು ಸಂಜೆ 3ಗಂಟೆಗೆ ಕಾರ್ಕಳದಿಂದ ಶಾರದ ಕಲ್ಯಾಣ ಮಂಟಪ, ಸಿಟಿ ಬಸ್ ನಿಲ್ದಾಣ, ಸಂಸ್ಕ್ರತ ಕಾಲೇಜು ಮಾರ್ಗದಲ್ಲಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

ಜ.15ರಂದು ಕುಂದಾಪುರ ಭಾಗದ ಹೊರೆ ಕಾಣಿಕೆ ಗೋವಿಂದ ಕಲ್ಯಾಣ ಮಂಟಪದಿಂದ ಸಂಜೆ 3ಗಂಟೆಗೆ ಹೊರ­ಡಲಿದೆ. ಸಂಜೆ 5ಗಂಟೆಗೆ ಕುಂಜಾರುಗಿರಿ, ಬೆಳ್ಳೆ,ಪಾಜಕ ಕ್ಷೇತ್ರದ  ಹೊರೆಕಾಣಿಕೆ ಸಲ್ಲಿಸಲಾಗುವುದು. ಜ.16ರಂದು ಮಂಗಳೂರು ಭಾಗದ ಹೊರೆಕಾಣಿಕೆ ಗೋವಿಂದ ಕಲ್ಯಾಣ ಮಂಟಪದಿಂದ ಸಂಜೆ 3ಗಂಟೆಗೆ ಮೆರವ­ಣಿಗೆಯಲ್ಲಿ ತೆರಳಲಿದೆ.

ಸಂಜೆ 5ಗಂಟೆಗೆ ಕಿನ್ನಿಮುಲ್ಕಿ ಭಾಗದ ಹೊರೆಕಾಣಿಕೆ ಕನ್ನರ್ಪಾಡಿ ದೇವಸ್ಥಾನದಿಂದ ಕಿನ್ನಿಮುಲ್ಕಿ ಮುಖ್ಯ ರಸ್ತೆ,  ಕೆ. ಎಂ. ಮಾರ್ಗ, ಸಂಸ್ಕ್ರತ ಕಾಲೇಜು ಮೂಲಕ ಸಾಗಲಿದೆ. ಜ.17ರಂದು ಸಂಜೆ 3ಗಂಟೆಗೆ ಮಟ್ಟು ಭಾಗದ ಹೊರೆ ಕಾಣಿಕೆ ಗೋವಿಂದ ಕಲ್ಯಾಣ ಮಂಟಪ, ಕೆ. ಎಂ. ಮಾರ್ಗ, ಸಂಸ್ಕ್ರತ ಕಾಲೇಜು ಮಾರ್ಗವಾಗಿ ಸಂಚರಿಸಲಿದೆ ಎಂದು ಪರ್ಯಾಯ ಮಹೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.