ADVERTISEMENT

‘ಎಲ್ಲ ರಸ್ತೆಗಳು ಗುಂಡಿ ಮುಕ್ತವಾಗಿರಬೇಕು’

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 9:17 IST
Last Updated 17 ಅಕ್ಟೋಬರ್ 2017, 9:17 IST

ಉಡುಪಿ: ಎಲ್ಲ ರಸ್ತೆ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣ ಗೊಳಿಸಿ ಎಂದು ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಯೋಜನೆಗಳಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಗಳ ಮಾಹಿತಿ ಪಡೆದು ಮಾತನಾಡಿದರು.

‘ಮಲ್ಪೆ, ಪರ್ಕಳ, ಬ್ರಹ್ಮಾವರ, ಬಾರ್ಕೂರು, ಉಡುಪಿ, ಮಣಿಪಾಲ ಭಾಗದ ರಸ್ತೆಗಳು ಗುಂಡಿ ಬಿದ್ದಿದ್ದು ಅವು ಗಳನ್ನು ಈ ಕೂಡಲೇ ಮುಚ್ಚಬೇಕು. ವಿಶೇಷವಾಗಿ ಮಣಿಪಾಲ, ಉಡುಪಿಯ ರಸ್ತೆಗಳ ದುರಸ್ತಿಯನ್ನು ಆದಷ್ಟು ಬೇಗ ಮಾಡಿ ಮುಗಿಸಿ. ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ರಸ್ತೆಗಳು ಗುಂಡಿರಹಿತವಾಗಿರಬೇಕು’ ಎಂದು ತಾಕೀತು ಮಾಡಿದರು.

ADVERTISEMENT

ರಸ್ತೆ, ಸೇತುವೆ, ಕಟ್ಟಡ, ಕಿಂಡಿ ಅಣೆಕಟ್ಟು, ಶಾಲಾ ಕಟ್ಟಡಗಳು, ನೀರು ಸರಬರಾಜು ಯೋಜನೆ, ನದಿ ದಂಡೆ ಸಂರಕ್ಷಣೆ, ತಡೆಗೋಡೆ ನಿರ್ಮಾಣ, ಮಲ್ಪೆ ಬೀಚ್‌ಗೆ ಮೂಲಭೂತ ಸೌಕರ್ಯ, ಮೀನುಗಾರಿಕಾ ಜೆಟ್ಟಿ ಹಾಗೂ ಆಸ್ಪತ್ರೆ ಕಟ್ಟಡ ನಿರ್ಮಾಣ ಸೇರಿ ಒಟ್ಟು ₹711 ಕೋಟಿ ವೆಚ್ಚದ 5,053 ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.