ADVERTISEMENT

ಕರ್ಣಾಟಕ ಬ್ಯಾಂಕ್ ಗ್ರಾಹಕ ಸ್ನೇಹಿ

ಬ್ಯಾಂಕ್‌ನ ಮುಖ್ಯ ಮಹಾಪ್ರಬಂಧಕ ರಾಘವೇಂದ್ರ ಭಟ್ ಎಂ. ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 13:56 IST
Last Updated 3 ಏಪ್ರಿಲ್ 2018, 13:56 IST

ಬೈಂದೂರು: ‘ಕರ್ಣಾಟಕ ಬ್ಯಾಂಕ್ ಸ್ಥಾಪನೆಯಾದಂದಿನಿಂದಲೂ ಗ್ರಾಹಕ ಸೇವೆಗೆ ಬದ್ಧವಾಗಿ ಕೆಲಸ ಮಾಡಿದೆ. ಆ ಬಳಿಕ ಆದ ಎಲ್ಲ ತಾಂತ್ರಿಕ ಬೆಳ ವಣಿಗೆಗಳನ್ನು ಅಳವಡಿಸಿಕೊಂಡು ಸೌಲಭ್ಯ ವೃದ್ಧಿಗೆ ಆದ್ಯತೆ ನೀಡಿದೆ. ಅದು ಗ್ರಾಹಕ ಸ್ನೇಹಿಯಾದ ಕಾರಣ ದಿಂದ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದೆ’ ಎಂದು ಬ್ಯಾಂಕ್‌ನ ಮುಖ್ಯ ಮಹಾಪ್ರಬಂಧಕ ರಾಘವೇಂದ್ರ ಭಟ್ ಎಂ. ಹೇಳಿದರು.ತ್ರಾಸಿಯ ಹೆದ್ದಾರಿ ಅಂಚಿನ ವಜ್ರಾಕ್ಷಿ ಸಂಕೀರ್ಣಕ್ಕೆ ಸ್ಥಳಾಂತರಗೊಂಡ ಶಾಖೆಯನ್ನು ಸೋಮವಾರ ಉದ್ಘಾಟಿ ಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

1971ರಲ್ಲಿ 98ನೇ ಶಾಖೆಯಾಗಿ ಆರಂಭವಾದ ತ್ರಾಸಿ ಶಾಖೆಯಲ್ಲಿ ಕಳೆದ ವರ್ಷ ₹75.5 ಕೋಟಿ ವ್ಯವಹಾರ ನಡೆದಿದ್ದರೆ, ಪ್ರಸಕ್ತ ಸಾಲಿನಲ್ಲಿ
ಅದು ₹80 ಕೋಟಿಗೆ ಏರಿದೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ವಿಶಾಲ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ಇಲ್ಲಿ ಖಾತೆಯಿಂದ ಹಣ ಪಡೆಯುವ, ಖಾತೆಗೆ ಪಾವತಿಸುವ, ಪಾಸ್ ಬುಕ್ ಮುದ್ರಿಸುವ ‘ಇ– ಲಾಬಿ’ ಹೊಂದಿರುವ ಅತ್ಯಾಧುನಿಕ ಎಟಿಎಂ ಅಳವಡಿಸಲಾಗಿದೆ. ಲಾಕರ್ ಸೌಲಭ್ಯ ಹೊಂದಿದ ಗರಿಷ್ಠ ಸುರಕ್ಷತೆ ಯ ಭದ್ರತಾ ಕೊಠಡಿ ಇದೆ. ದಿನದ 24 ಗಂಟೆಯೂ ಸೇವೆ ಪಡೆಯಲು ಸಾಧ್ಯವಾಗುವ ಎಲ್ಲ ವಿಧದ ‘ಇ ಬ್ಯಾಂಕಿಂಗ್’ ಸೌಲಭ್ಯ ಪಡೆ ಯಬಹುದಾಗಿದೆ ಎಂದರು.

ಕ್ರೈಸ್ಟ್‌ ಕಿಂಗ್ ಚರ್ಚ್‌ನ ಧರ್ಮಗುರು ಚಾರ್ಲ್ಸ್‌ ಲೂಯಿಸ್ ಎಟಿಎಂ ಉದ್ಘಾಟಿಸಿದರು. ವಿಶ್ವನಾಥ ಶೆಟ್ಟಿ ಪ್ರಾರ್ಥನೆ ಹಾಡಿದರು. ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕಿ ವಿದ್ಯಾಲಕ್ಷ್ಮೀ ಆರ್. ಸ್ವಾಗತಿಸಿದರು. ಶಾಖಾ ಪ್ರಬಂಧಕ ಗೌತಮ್ ಶೆಟ್ಟಿ ವಂದಿಸಿದರು. ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕ ವಾದಿರಾಜ ಭಟ್ ನಿರೂಪಿಸಿದರು.

ADVERTISEMENT

ಗೌರವ ಸಮರ್ಪಣೆ

ಹಿಂದಿನ ಕಟ್ಟಡದ ಮಾಲೀಕ ರಾಕಿ ಡಿ. ಆಲ್ಮೇಡ, ನೂತನ ಕಟ್ಟಡದ ಮಾಲಕಿ ವಜ್ರಾಕ್ಷಿ, ಧರ್ಮಗುರು ಚಾರ್ಲ್ಸ್‌ ಲೂಯಿಸ್, ಶಾಖೆಯ ಪ್ರಥಮ ಗ್ರಾಹಕ ರಾಮಣ್ಣ ಶೆಟ್ಟಿ, ಹಿರಿಯ ಗ್ರಾಹಕರಾದ ವೆಂಕಟರಮಣ ಅವಭೃತ, ರಾಜು ದೇವಾಡಿಗ, ವೆಂಕಟ ಪೂಜಾರಿ, ಕೆ. ರಾಮಚಂದ್ರ ಹೆಬ್ಬಾರ್, ಶೀನ ದೇವಾಡಿಗ, ನಾಗ ಖಾರ್ವಿ, ತಮ್ಮಯ್ಯ ದೇವಾಡಿಗ, ಇತರರನ್ನು ಗೌರವಿಸಲಾಯಿತು.

**

ಕರ್ಣಾಟಕ ಬ್ಯಾಂಕ್ ಕಳೆದ ವರ್ಷ ₹93 ಸಾವಿರ ಕೋಟಿ ವ್ಯವಹಾರ ಮಾಡಿದ್ದರೆ, ಪ್ರಸಕ್ತ ಸಾಲಿನಲ್ಲಿ ಅದು ನಿರೀಕ್ಷಿತ ಗುರಿ ಮೀರಿ ₹1,10,950 ಕೋಟಿಗೆ ಏರಿದೆ -  ರಾಘವೇಂದ್ರ ಭಟ್ ಎಂ,ಮುಖ್ಯ ಮಹಾಪ್ರಬಂಧಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.