ADVERTISEMENT

ಕಾರ್ಕಳ: ಆ.4ರಂದು ಗ್ರಾಮ ಪಂಚಾಯಿತಿ ಉಪಚುನಾವಣೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 10:10 IST
Last Updated 17 ಜುಲೈ 2013, 10:10 IST

ಕಾರ್ಕಳ: ತಾಲ್ಲೂಕು ವ್ಯಾಪ್ತಿಯಲ್ಲಿ ತೆರವುಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಗಸ್ಟ್ 4ರಂದು ಉಪಚುನಾವಣೆ ನಡೆಯಲಿದೆ. ಬೈಲೂರು ಗ್ರಾಮ ಪಂಚಾಯಿತಿಯ ಕೌಡೂರು-2ರಲ್ಲಿ ಹಿಂದುಳಿದ ವರ್ಗ ಎ, ಎರ್ಲಪ್ಪಾಡಿ ಗ್ರಾಮ ಪಂಚಾಯಿತಿಯ ಎರ್ಲಪ್ಪಾಡಿ-3ರಲ್ಲಿ ಪರಿಶಿಷ್ಟ ಜಾತಿ ಮಹಿಳೆ, ಇನ್ನಾ ಪಂಚಾಯಿತಿಯ-2ರಲ್ಲಿ ಹಿಂದುಳಿದ ವರ್ಗ ಎ(ಮಹಿಳೆ), ಈದು ಗ್ರಾಮ ಪಂಚಾಯಿತಿಯ ಈದು-2ರಲ್ಲಿ ಹಿಂದುಳಿದ ವರ್ಗ ಎ(ಮಹಿಳೆ), ಕುಚ್ಚೂರು ಗ್ರಾಮ ಪಂಚಾಯಿತಿಯ ಬೆಳಂಜೆ-1 ಸಾಮಾನ್ಯ(ಮಹಿಳೆ), ಮಾಳ ಗ್ರಾಮ ಪಂಚಾಯಿತಿಯ ಮಾಳ-1ರಲ್ಲಿ ಪರಿಶಿಷ್ಟ ಪಂಗಡ ಮಹಿಳೆ, ಮರ್ಣೆ ಗ್ರಾಮ ಪಂಚಾಯಿತಿಯ ಹೆರ್ಮುಂಡೆ-1ರಲ್ಲಿ ಸಾಮಾನ್ಯ(ಮಹಿಳೆ), ಮುಡಾರು ಗ್ರಾಮ ಪಂಚಾಯಿತಿಯ ಮುಡಾರು-2ರಲ್ಲಿ ಸಾಮಾನ್ಯ(ಮಹಿಳೆ), ನಿಟ್ಟೆ ಗ್ರಾಮ ಪಂಚಾಯಿತಿಯ ನಿಟ್ಟೆ-2ರಲ್ಲಿ ಹಿಂದುಳಿದ ವರ್ಗ ಎ(ಮಹಿಳೆ) ಈ ಪ್ರಕಾರ ಮೀಸಲಾತಿ ಪ್ರಕಟಗೊಂಡಿದೆ.

ಉಡುಪಿ ಜಿಲ್ಲಾಧಿಕಾರಿ ಡಾ.ಟಿ.ಎಂ. ರೇಜು ಅವರು ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜುಲೈ 24.  ನಾಮಪತ್ರ ಪರಿಶೀಲಿಸುವ ಕೊನೆಯ ದಿನಾಂಕ ಜುಲೈ 25. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಜುಲೈ 27. ಅವಶ್ಯವಿದ್ದಲ್ಲಿ ಮತದಾನ ನಡೆಸಬೇಕಾದ ದಿನ ಆಗಸ್ಟ್ 4. ಮರುಮತದಾನ ಅವಶ್ಯವಿದ್ದರೆ ನಡೆಯುವ ದಿನ ಆಗಸ್ಟ್ 6. ಮತಗಳ ಎಣಿಕೆ ಆಗಸ್ಟ್ 7ರಂದು ಬೆಳಿಗ್ಗೆ 8ರಿಂದ ತಾಲೂಕು ಕೇಂದ್ರದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.