ADVERTISEMENT

ಕಾರ್ಯಕರ್ತರೊಂದಿಗೆ ಕೆಲಸ ಮಾಡುವ ಹುಮ್ಮಸ್ಸು

ಕೋಟ ಬ್ಲಾಕ್ ಕಾಂಗ್ರೆಸ್ ಕೃತಜ್ಞತಾ ಸಭೆಯಲ್ಲಿ ರಾಕೇಶ್ ಮಲ್ಲಿ

​ಪ್ರಜಾವಾಣಿ ವಾರ್ತೆ
Published 25 ಮೇ 2018, 4:16 IST
Last Updated 25 ಮೇ 2018, 4:16 IST

ಕೋಟ(ಬ್ರಹ್ಮಾವರ) : ‘ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿತ್ತು. ಫಲಿತಾಂಶ ಬಂದ ಮೇಲೆ ನಿರಾಶೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ನಾವು ಸೋತಿದ್ದೇವೆ. ಮತಯಂತ್ರದ ದೋಷವೇ ಇದಕ್ಕೆ ಕಾರಣ ಎಂದು ಅನಿಸುತ್ತದೆ. ಆದರೆ ನನ್ನೊಂದಿಗಿದ್ದು ಸಹಕರಿಸಿದ ನಮ್ಮೆಲ್ಲ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇನ್ನು ಮುಂದೆ ಸದಾ ನಾನು ನಿಮ್ಮೊಂದಿಗಿದ್ದು ಜನರ ಸೇವೆ ಮಾಡುತ್ತೇನೆ’ ಎಂದು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಹೇಳಿದರು.

ಕೋಟ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಈಚೆಗೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.

ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ತೋನ್ಸೆ, ಕಾಂಗ್ರೆಸ್ ಮುಖಂಡರಾದ ಕೊಳ್ಕೆಬೈಲು ಕಿಶನ್ ಹೆಗ್ಡೆ, ಮಹಮ್ಮದ್ ಗಫೂರ್, ಅಮೃತ್ ಶೆಣೈ, ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ ಮಾತನಾಡಿದರು.

ADVERTISEMENT

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ರಾಬರ್ಟ್, ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಚುನಾವಣೆ ಉಸ್ತುವಾರಿಗಳಾದ ಶಂಭು ಪೂಜಾರಿ, ಕಿಶೋರ್ ಕುಮಾರ್ ಶೆಟ್ಟಿ, ರಮಾನಂದ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಾರಾಂ ಸಾಸ್ತಾನ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಎಸ್‌ಸಿ-ಎಸ್‌ಟಿ ಘಟಕದ ಗಣೇಶ್ ನೆಲ್ಲಿಬೆಟ್ಟು ಉಪಸ್ಥಿತರಿದ್ದರು.

ಸಾಲಿಗ್ರಾಮ ಪಟ್ಟಣ ಪಂಚಾಯಾತಿ ಸದಸ್ಯ ಶ್ರೀನಿವಾಸ ಅಮೀನ್ ಸ್ವಾಗತಿಸಿದರು. ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕಾರ್ಕಡ ಅಚ್ಯುತ ಪೂಜಾರಿ ವಂದಿಸಿದರು.

**
ಅಭಿವೃದ್ದಿಯ ನೇತಾರರಾದ ಬೈಂದೂರು ಗೋಪಾಲ ಪೂಜಾರಿ, ಉಡುಪಿಯ ಪ್ರಮೋದ್ ಮಧ್ವರಾಜ್, ಕಾಪುವಿನ ವಿನಯಕುಮಾರ್ ಸೊರಕೆ ಮತಯಂತ್ರದ ದೋಷದಿಂದ ಸೋತಿದ್ದಾರೆ. ಇಂತಹ ಮತಯಂತ್ರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಾಯಕರು, ರಾಜ್ಯ ಕಾಂಗ್ರೆಸ್ ನಾಯಕರು ದೂರು ನೀಡಬೇಕಾಗಿದೆ
ಶಂಕರ್ ಕುಂದರ್, ಅಧ್ಯಕ್ಷ,ಕೋಟ ಬ್ಲಾಕ್ ಕಾಂಗ್ರೆಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.