ADVERTISEMENT

ಗೋಪಾಲ ಭಂಡಾರಿ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್‌ ಬಂಡಾಯದ ನಡುವೆಯೂ ಚುನಾವಣಾ ಆಖಾಡಕ್ಕೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 11:56 IST
Last Updated 21 ಏಪ್ರಿಲ್ 2018, 11:56 IST
ಕಾರ್ಕಳದ ಮಾಜಿಶಾಸಕ ಎಚ್. ಗೋಪಾಲ ಭಂಡಾರಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶುಕ್ರವಾರ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಕುಸುಮಾ ಅವರಿಗೆ ನಾಮಪತ್ರ ಸಲ್ಲಿಸಿದರು. ತಹಶೀಲ್ದಾರ್ ಮೊಹಮದ್ ಇಸಾಕ್, ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಕ್ಷೇತ್ರ ಉಸ್ತುವಾರಿ ಶೇಖರ ಮಡಿವಾಳ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್, ಹೆಬ್ರಿ ಬ್ಲಾಕ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಕಳದ ಮಾಜಿಶಾಸಕ ಎಚ್. ಗೋಪಾಲ ಭಂಡಾರಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶುಕ್ರವಾರ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಕುಸುಮಾ ಅವರಿಗೆ ನಾಮಪತ್ರ ಸಲ್ಲಿಸಿದರು. ತಹಶೀಲ್ದಾರ್ ಮೊಹಮದ್ ಇಸಾಕ್, ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಕ್ಷೇತ್ರ ಉಸ್ತುವಾರಿ ಶೇಖರ ಮಡಿವಾಳ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್, ಹೆಬ್ರಿ ಬ್ಲಾಕ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.   

ಕಾರ್ಕಳ: ಟಿಕೆಟ್‌ ಹಂಚಿಕೆ ತೀವ್ರ ವಿವಾದ ತಾರಕಕ್ಕೇರಿದ್ದರೂ ಅದರ ನಡುವೆಯೇ ಕಾರ್ಕಳ ವಿಧಾನ ಸಭಾ ಚುನಾವಣಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಚ್.ಗೋಪಾಲ ಭಂಡಾರಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಎಸ್.ಎಸ್.ಎಲ್‌ಸಿವರಿಗೆ ವ್ಯಾಸಂಗ ಮಾಡಿರುವ 68 ವರ್ಷದ ಭಂಡಾರಿ ಅವರು ಕಾರ್ಕಳ ವಿಧಾನ ಸಭಾ ಕ್ಷೇತ್ರದಿಂದ ಈ ಹಿಂದೆ ನಾಲ್ಕು ಬಾರಿ ಸ್ಪರ್ಧಿಸಿದ್ದು ಎರಡು ಬಾರಿ ವಿಜೇತರಾಗಿದ್ದಾರೆ. ಇದೀಗ ಐದನೇ ಬಾರಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಭಂಡಾರಿ 2017–18  ಸಾಲಿನಲ್ಲಿ ಒಟ್ಟು ಆದಾಯ ₹ 7.02 ಲಕ್ಷ ಘೋಷಿಸಿಕೊಂಡಿದ್ದಾರೆ. ಇವರ ಒಟ್ಟು ಚರಾಸ್ತಿ ಮೌಲ್ಯ 15.40 ಲಕ್ಷ ಹಾಗೂ ಇವರ ಪತ್ನಿ ಪ್ರಕಾಶಿನಿ ಜಿ. ಭಂಡಾರಿ ₹ 4 ಲಕ್ಷ , ಖರೀದಿಸಿದ ಸ್ಥಿರಾಸ್ತಿ ಮೌಲ್ಯ ₹ 4 ಲಕ್ಷ, ಭಂಡಾರಿ ಅವರ ಕೈಯಲ್ಲಿ ಸ್ವಂತ ಉಳಿತಾಯದ ನಗದು ₹50 ಸಾವಿರ, ಹೆಬ್ರಿಯ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ₹ 4272 ಇದೆ.

ADVERTISEMENT

ಕಾರ್ಕಳ ವಿಜಯಾ ಬ್ಯಾಂಕ್ ಖಾತೆಯಲ್ಲಿ ₹ 1653. ಕಾರ್ಕಳ ಕಾರ್ಪೋರೇಷನ್ ಬ್ಯಾಂಕ್ ಖಾತೆಯಲ್ಲಿ ₹ 1.08 ಲಕ್ಷ, ಅಪೆಕ್ಸ್ ಬ್ಯಾಂಕ್ ಖಾತೆಯಲ್ಲಿ ₹ 450. ಅಪೆಕ್ಸ್ ಬ್ಯಾಂಕ್ ಇನ್ನೊಂದು ಖಾತೆಯಲ್ಲಿ ₹ 916. ವರಂಗ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಖಾತೆಯಲ್ಲಿ ₹ 3,300. ಕುಕ್ಕುಂದೂರು ಸಿಂಡಿಕೇಟ್ ಬ್ಯಾಂಕ್ ಖಾತೆಯಲ್ಲಿ ₹ 22 ಸಾವಿರವಿದೆ.

ಭಂಡಾರಿ ಹೆಸರಿನಲ್ಲಿ ಕಬ್ಬಿನಾಲೆ ಯಲ್ಲಿರುವ ಗಣಪತಿ ಕ್ಯಾಶು ಇಂಡಸ್ಟ್ರೀಸ್ ನಲ್ಲಿ ಶೇ 25 ರಷ್ಟು ಪಾಲುದಾರಿಕೆಯಿದೆ. ₹ 25 ಸಾವಿರದ ತಲಾ ಎರಡು ಹಾಗೂ ₹ 50ಸಾವಿರದ ತಲಾ ಎರಡು ವಿಮೆ ಪಾಲಿಸಿ ಇವೆ. ₹ 12 ಲಕ್ಷ ಮೌಲ್ಯದ ಇನ್ನೋವಾ ಕಾರು ಇದೆ.

ಭಂಡಾರಿ ಪತ್ನಿ ಪ್ರಕಾಶಿನಿ ಜಿ.ಭಂಡಾರಿ ಹೆಸರಿನಲ್ಲಿ ₹ 3.77 ಲಕ್ಷ ಮೌಲ್ಯದ 128 ಗ್ರಾಂ ಚಿನ್ನ, ₹ 22,500 ಮೌಲ್ಯದ 500 ಗ್ರಾಂ ಬೆಳ್ಳಿಯಿದೆ. ಇವರ ಒಟ್ಟು ಚರಾಸ್ತಿ ಮೌಲ್ಯ ₹ 15.40 ಲಕ್ಷ .

ಭಂಡಾರಿ ಅವರ ಹೆಸರಿನಲ್ಲಿ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿಯೂ ಚಾರಾ ಗ್ರಾಮದಲ್ಲಿ 7.41 ಎಕರೆ ಭೂಮಿಯಲ್ಲಿ 1/6ಅಂಶ ಹಕ್ಕು ಇದೆ. ಭಂಡಾರಿ ಅವರ ಪತ್ನಿ ಹೆಸರಿನಲ್ಲಿ ಶಿವಪುರ ಗ್ರಾಮದಲ್ಲಿ 1.99 ಎಕರೆ ಭೂಮಿಯಿದೆ. ಭುಮಿಯ ಮೇಲೆ ₹4 ಲಕ್ಷದಷ್ಟು ಹೂಡಿಕೆ ಮಾಡಿದ್ದಾರೆ.

ಈ ಭೂಮಿಗೆ ಈಗ ಮಾರುಕಟ್ಟೆ ಬೆಲೆ ₹ 25 ಲಕ್ಷವಿದ್ದು ಪತ್ನಿ ಹೆಸರಿನ ಭೂಮಿಗೆ ಈಗ ಮಾರುಕಟ್ಟೆ ಬೆಲೆ ₹ 99500, ಬೆಂಗಳೂರಿನಲ್ಲಿ ಶಾಸಕರ ಗೃಹ ನಿರ್ಮಾಣ ಸಹಕಾರಿ ಸಂಘದ ಸೈಟ್‌ ಇದೆ. ಅದರ ಪ್ರಸಕ್ತ ಮಾರುಕಟ್ಟೆ ಬೆಲೆ ₹ 21.11 ಲಕ್ಷ. ಇವರ ಪತ್ನಿಯ ಹೆಸರಿನಲ್ಲಿ ಸರ್ಕಾರದಿಂದ ಮಂಜೂರಿಯಾದ ಅರ್ಧ ಎಕರೆ ಜಾಗವಿ ಇದೆ.

ಅವರ ಮಾರುಕಟ್ಟೆ ಮೌಲ್ಯ ₹ 1 ಲಕ್ಷ. ಭಂಡಾರಿ ಅವರ ಹೆಸರಿನಲ್ಲಿ ನಿರ್ಮಿತ ನಿವೇಶನಕ್ಕೆ ₹ 5 ಲಕ್ಷ, ಕುಕ್ಕುಂದೂರು ಗ್ರಾಮದಲ್ಲಿ ಒಂದು ಸಾವಿರ ಚದರ ಅಡಿ ಕಟ್ಟಡದ ಮಾರುಕಟ್ಟೆ ಮೌಲ್ಯ ₹ 7ಲಕ್ಷ ಹೀಗೆ ಒಟ್ಟು ಸ್ಥಿರಾಸ್ತಿ ಮೌಲ್ಯ ₹ 58.11 ಲಕ್ಷದ ಆಸ್ತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.