ADVERTISEMENT

ಗ್ರಾಹಕರ ಅಪೇಕ್ಷೆಗೆ ತಕ್ಕಂತೆ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 5:35 IST
Last Updated 14 ಜುಲೈ 2017, 5:35 IST
ಕುಂದಾಪುರ ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ನವೀಕೃತ ಕೇಂದ್ರ ಕಚೇರಿಯನ್ನು ಗುರುವಾರ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರಕುಮಾರ ಉದ್ಘಾಟಿಸಿದರು.
ಕುಂದಾಪುರ ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ನವೀಕೃತ ಕೇಂದ್ರ ಕಚೇರಿಯನ್ನು ಗುರುವಾರ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರಕುಮಾರ ಉದ್ಘಾಟಿಸಿದರು.   

ಕುಂದಾಪುರ: ಬದಲಾವಣೆ ಯುಗದಲ್ಲಿ ಗ್ರಾಹಕರ ಅಪೇಕ್ಷೆಗಳಿಗೆ ತಕ್ಕಂತೆ ಆರ್ಥಿಕ ಸಂಸ್ಥೆಗಳು ಬದಲಾವಣೆ ಆಗುಬೇಕಾ ಗುತ್ತದೆ.  ಈ ನಿಟ್ಟಿನಲ್ಲಿ ಸಹಕಾರಿ ಸಂಘ ಸಂಸ್ಥೆಗಳು ಬದಲಾವಣೆಗೆ ಹೊಂದಿ ಕೊಳ್ಳುವ ಮೂಲಕ ಗ್ರಾಹಕರ ವಿಶ್ವಾಸ ಮತ್ತಷ್ಟು ವಿಸ್ತಾರ ಆಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

ಇಲ್ಲಿನ ಕುಂದೇಶ್ವರ ದೇವಸ್ಥಾನದ ರಸ್ತೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ನವೀಕೃತ ಕೇಂದ್ರ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಸಹಕಾರಿಗಳು ಒಗ್ಗಟ್ಟಿನಲ್ಲಿ ಇರುವುದರಿಂದ ಸಂಸ್ಥೆಯ ಜತೆಯಲ್ಲಿ ಸಹಕಾರಿ ಕ್ಷೇತ್ರವೂ ಮುಂದುವರಿಯಲು ಸಾಧ್ಯ. ನೂತನ ಆರ್ಥಿಕ ನೀತಿಗಳು ಪರಿಚಯ ಆಗುತ್ತಿರುವ ಈ ದಿನಗಳಲ್ಲಿ ಗ್ರಾಹಕರ ವಿಶ್ವಾಸದೊಂದಿಗೆ ಸಂಸ್ಥೆಗಳು ಬೆಳೆಯುವುದರಿಂದ ಗ್ರಾಹಕನಿಗೂ ಅನೂಕೂಲ ದೊರಕುತ್ತದೆ. ಸಂಸ್ಥೆ ಹಾಗೂ ದೇಶ ಬೆಳೆಯಲು ಸಾಧ್ಯ ಎಂದು ಹೇಳಿದರು.

ADVERTISEMENT

ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ತಾಲ್ಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಮಲ್ಯಾಡಿ ಮೋಹನ್‌ ದಾಸ್‌ ಶೆಟ್ಟಿ, ಉಪಾಧ್ಯಕ್ಷ ಹಕ್ಲಾಡಿ ಸಂತೋಷ್‌ಕುಮಾರ ಶೆಟ್ಟಿ, ನಿರ್ದೇಶಕರಾದ ಎಸ್‌.ರಾಜು ಪೂಜಾರಿ, ಹೆಚ್‌. ಮಂಜಯ್ಯ ಶೆಟ್ಟಿ, ಹೆಚ್‌. ಹರಿಪ್ರಸಾದ್‌ ಶೆಟ್ಟಿ, ಕೆ.ಮೋಹನ್‌ ಪೂಜಾರಿ, ಭುಜಂಗ ಶೆಟ್ಟಿ, ಎಚ್‌. ಚಂದ್ರಶೇಖರ ಶೆಟ್ಟಿ, ಎಚ್‌.ದೀನ್‌ಪಾಲ್‌ ಶೆಟ್ಟಿ, ಸತೀಶ್‌ ಎಂ ನಾಯಕ್‌, ಬಿ.ರಘುರಾಮ ಶೆಟ್ಟಿ, ವ್ಯವಸ್ಥಾಪಕಿ ಐರಿನ್‌ ಡಿಮೆಲ್ಲೊ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ ಹೆಗ್ಡೆ, ಜಿಲ್ಲಾ ಸಹಕಾರಿ ಉಪನಿಬಂಧಕ ಪ್ರವೀಣ್‌ ನಾಯ್ಕ್‌, ಸಹಕಾರಿ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ ಎಂ.ಜೆ, ಸಹಕಾರಿ ಕ್ಷೇತ್ರದ ಪ್ರಮುಖರಾದ ಎಸ್‌.ದಿನಕರ ಶೆಟ್ಟಿ, ಎನ್‌.ಮಂಜಯ್ಯ ಶೆಟ್ಟಿ ಸಬ್ಲಾಡಿ, ಸುಧಾಕರ ಶೆಟ್ಟಿ ಬಾಂಡ್ಯಾ, ರಾಜೇಶ್‌ ಕೆ.ಸಿ ಕುಂದಾಪುರ, ರಮೇಶ್‌ ಗಾಣಿಗ ಕೊಲ್ಲೂರು, ಸಂಪಿಗೇಡಿ ಸಂಜೀವ ಶೆಟ್ಟಿ, ಶರತ್‌ಕುಮಾರ ಶೆಟ್ಟಿ ಕಟ್‌ಬೇಲ್ತೂರು, ನೈಲಾಡಿ ಶಿವರಾಮ ಶೆಟ್ಟಿ, ಬುದ್ದರಾಜ್‌ ಶೆಟ್ಟಿ ಕೋಟೇಶ್ವರ, ಯು.ಕೃಷ್ಣಮೂರ್ತಿ ಕುಂದಾಪುರ, ಜಯರಾಮ್‌ ಶೆಟ್ಟಿ ಬೆಳ್ವೆ, ಕೆಂಚನೂರು ಸೋಮಶೇಖರ ಶೆಟ್ಟಿ, ಮಹೇಶ್‌ ಶೆಟ್ಟಿ ಮೊಳಹಳ್ಳಿ, ಸೀತಾರಾಮ ಶೆಟ್ಟಿ ಕಾವ್ರಾಡಿ, ವಿಶ್ವೇಶ್ವರ ಹೆಗ್ಗಡೆ ಕೊಲ್ಲೂರು, ತಾಲ್ಲೂಕು ಸಹಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಹೆಚ್‌.ರಾಜೀವ್ ಶೆಟ್ಟಿ ಸೇರಿದಂತೆ ಹಲವರು ಇದ್ದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ ಬೈಂದೂರು ವಂದಿಸಿದರು, ಪತ್ರಕರ್ತ ಸುಬ್ರಮಣ್ಯ ಪಡುಕೋಣೆ ನಿರೂಪಿಸಿದರು.

* * 

ಬದಲಾವಣೆಗೆ ತಕ್ಕಂತೆ ಸಹಕಾರಿ ಸಂಸ್ಥೆಗಳು ತಮ್ಮ ವೇಗ ಹೆಚ್ಚಿಸಿಕೊಳ್ಳುವ ಜತೆಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದಕ್ಕೆ ಮುಂದಾಗುತ್ತಿವೆ.
ಡಾ.ಎಂ.ಎನ್‌.ರಾಜೇಂದ್ರಕುಮಾರ
ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.