ADVERTISEMENT

ಜಿ.ಎಂ ವಿದ್ಯಾನಿಕೇತನ: ಪರಿಸರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 11:13 IST
Last Updated 19 ಜೂನ್ 2013, 11:13 IST

ಬ್ರಹ್ಮಾವರ: ಹಾರಾಡಿಯ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಪರಿಸರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.

ಈ ಸಂದರ್ಭ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ  ಕಾರ್ಯಕ್ರಮ ಸಂಯೋಜಕಿ ಡಾ.ಜಯಲಕ್ಷ್ಮೀ ನಾರಾಯಣ್ ಹೆಗ್ಡೆ ಮಾತನಾಡಿ, ಅರಣ್ಯ ರಕ್ಷಣೆಯ ಅನಿವಾರ್ಯತೆ ಮತ್ತು ಆಹಾರ ಸದ್ಬಳಕೆಯ ಬಗ್ಗೆ ತಮ್ಮ ಪೋಷಕರಿಗೆ ಅರಿವನ್ನು ಮೂಡಿಸಬೇಕಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿದ್ಯಾರ್ಥಿಗಳು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದದರು. ಪೇಪರ್ ಬ್ಯಾಗ್ ತಯಾರಿಸುವುದರ ಮೂಲಕ, ಪ್ಲಾಸ್ಟಿಕ್ ಬಳಕೆಯ ವಿರೋಧಕ್ಕೆ ಪುಷ್ಟಿ ನೀಡಿದರು. ನಂತರ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಪ್ರಹಸನ, ನೃತ್ಯ ಮತ್ತು ಸಮೂಹಗಾಯನಗಳು ಎಲ್ಲರಲ್ಲೂ ಪರಿಸರ ಜಾಗೃತಿ ಮೂಡಿಸಿತು.

ಸಂಸ್ಥೆಯ ಪ್ರಾಂಶುಪಾಲ ಜಾರ್ಜ್ ಕುರಿಯನ್ ಪರಿಸರವನ್ನು ಪ್ರೀತಿಸಿ, ಮಾಲಿನ್ಯವನ್ನು ತಡೆಗಟ್ಟುವಲ್ಲಿ
ಪ್ರತಿಯೊಬ್ಬರ ಪ್ರಯತ್ನ ಅತಿ ಅಗತ್ಯ ಎಂದರು. ಆಡಳಿತ ಮಂಡಳಿಯ ಅಧ್ಯಕ್ಷ  ಪ್ರಕಾಶ್ಚಂದ್ರ ಶೆಟ್ಟಿ ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ, ಅದು ಜೀವನ ಪರ್ಯಂತ ಆಚರಿಸುವಂತದ್ದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.