ADVERTISEMENT

ಜಿಲ್ಲೆಯ 5 ಕ್ಷೇತ್ರಗಳಲ್ಲಿ 34 ಮಂದಿ ಕಣದಲ್ಲಿ

ಉಡುಪಿ ಜಿಲ್ಲೆ: ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ

​ಪ್ರಜಾವಾಣಿ ವಾರ್ತೆ
Published 12 ಮೇ 2018, 6:34 IST
Last Updated 12 ಮೇ 2018, 6:34 IST

ಉಡುಪಿ: ಮತದಾರರು ಇಂದು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿರುವ ಒಟ್ಟು 34 ಅಭ್ಯರ್ಥಿಗಳ ಸೋಲು– ಗೆಲುವು ನಿರ್ಧರಿಸಲಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಎಸ್‌ಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ಕಾರ್ಕಳ ಕ್ಷೇತ್ರವನ್ನು ಆ ಪಕ್ಷಕ್ಕೆ ಬಿಟ್ಟುಕೊಟ್ಟು ಉಳಿದ ನಾಲ್ಕು ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನೌಹೇರ ಶೇಖ್ ಅವರ ಎಂಇಪಿ ಸಹ ಈ ಬಾರಿ ಸ್ಪರ್ಧಾ ಕಣದಲ್ಲಿದೆ. ಕುಂದಾಪುರ ಕ್ಷೇತ್ರವನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಎಂಇಪಿ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಸಂಯುಕ್ತ ಜನತಾದಳದ ಅಭ್ಯರ್ಥಿಗಳು ಬೈಂದೂರು ಮತ್ತು ಕುಂದಾಪುರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಿಪಿಐಎಂ ಬೈಂದೂರು ಕ್ಷೇತ್ರದಲ್ಲಿ ಮಾತ್ರ ತನ್ನ ಅಭ್ಯರ್ಥಿ ಕಣಕ್ಕಿಳಿಸಿ, ಗೆಲುವಿವಾಗಿ ತನ್ನೆಲ್ಲಾ ಶಕ್ತಿ ವಿನಿಯೋಗಿಸುತ್ತಿದೆ. ಕಟ್ಟರ್ ಹಿಂದುತ್ವವಾದಿ ಪಕ್ಷ ಶಿವಸೇನೆ ಉಡುಪಿಯಲ್ಲಿ ಸ್ಪರ್ಧಿಸುವ ಮೂಲಕ ಬಿಜೆಪಿ ಮತಗಳನ್ನು ತನ್ನತ್ತ ಸೆಳೆಯುವ ಪ್ರಯತ್ನದಲ್ಲಿದೆ. ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಸ್ವಯಂ ನಿವೃತ್ತಿ ಪಡೆದಿರುವ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರು ಕಾಪು ಕ್ಷೇತ್ರದಿಂದ ಚುನಾವಣೆ ಎದುರಿಸುತ್ತಿದ್ದಾರೆ. ಅದೇ ಕ್ಷೇತ್ರದವರಾದ ಅವರು ಜನರ ಮನ ಗೆಲ್ಲಲು ಕಸರತ್ತು ನಡೆಸಿದ್ದಾರೆ.

ADVERTISEMENT

ಬೈಂದೂರಿನಲ್ಲಿ ಅತಿ ಹೆಚ್ಚು ಅಂದರೆ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಪು ಮತ್ತು ಕುಂದಾಪುರ ಕ್ಷೇತ್ರದಲ್ಲಿ ತಲಾ 5 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಉಡುಪಿಯಲ್ಲಿ ಹಾಗೂ ಕಾರ್ಕಳದಲ್ಲಿ ತಲಾ 7 ಮಂದಿ ಸ್ಪರ್ಧೆಯಲ್ಲಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಇರುವಂತೆ ಕಂಡು ಬರುತ್ತಿದೆ. ಉಳಿದ ಪಕ್ಷಗಳ ಅಭ್ಯರ್ಥಿಗಳು ಪಡೆಯುವ ಮತಗಳು ಫಲಿತಾಂಶ ಏರುಪೇರು ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಬೈಂದೂರು ಕ್ಷೇತ್ರದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು

ಕೆ. ಗೋಪಾಲ ಪೂಜಾರಿ– ಕಾಂಗ್ರೆಸ್‌
ಬಿ.ಎಂ. ಸುಕುಮಾರ ಶೆಟ್ಟಿ–ಬಿಜೆಪಿ
ಸುರೇಶ್ ಕಲ್ಲಗಾರ– ಸಿಪಿಐಎಂ
ಸಿ. ರವೀಂದ್ರ– ಜೆಡಿಎಸ್
ಮಂಜುನಾಥ ಕೆರಾಡಿ– ಜನಾತದಳ (ಯು)
ಅಬ್ದುಲ್ ಹಜೀದ್– ಎಂಇಪಿ
ಸುರೇಶ್ ಪೂಜಾರಿ– ಸ್ವತಂತ್ರ
ಬಿ. ಸುಬ್ರಹ್ಮಣ್ಯ– ಸ್ವತಂತ್ರ
ಮರಕಾಲ ಮಂಜುನಾಥ– ಸ್ವತಂತ್ರ

ಉಡುಪಿ ಕ್ಷೇತ್ರ:
ಪ್ರಮೋದ್ ಮಧ್ವರಾಜ್– ಕಾಂಗ್ರೆಸ್
ಕೆ. ರಘುಪತಿ ಭಟ್– ಬಿಜೆಪಿ
ಗಂಗಾಧರ–ಜೆಡಿಎಸ್
ಮಧುಕರ ಮುದ್ರಾಡಿ– ಶಿವಸೇನೆ
ವಿಶ್ವನಾಥ– ಎಂಇಪಿ
ಸುಧೀರ್ ಕಾಂಚನ್–ಸ್ವತಂತ್ರ
ಶೇಖರ್ ಹಾವಂಜೆ– ಸ್ವತಂತ್ರ
ಮಹೇಶ್– ಸ್ವತಂತ್ರ

ಕಾಪು ಕ್ಷೇತ್ರ:
ವಿನಯಕುಮಾರ್ ಸೊರಕೆ– ಕಾಂಗ್ರೆಸ್
ಲಾಲಾಜಿ ಮೆಂಡನ್– ಬಿಜೆಪಿ
ಅನುಪಮಾ ಶೆಣೈ– ಭಾರತೀಯ ಜನಶಕ್ತಿ ಕಾಂಗ್ರೆಸ್
ಅಬ್ದುಲ್ ಇಬ್ರಾಹಿಂ– ಜೆಡಿಎಸ್
ಅಬ್ದುಲ್ ರಹಿಮಾನ್– ಎಂಇಪಿ

ಕುಂದಾಪುರ ಕ್ಷೇತ್ರ:
ರಾಕೇಶ್ ಮಲ್ಲಿ– ಕಾಂಗ್ರೆಸ್
ಹಾಲಾಡಿ ಶ್ರೀನಿವಾಸ ಶೆಟ್ಟಿ– ಬಿಜೆಪಿ
ರಾಜೀವ್ ಕೋಟ್ಯಾನ್–ಜನತಾದಳ (ಯು)
ಎಸ್‌. ಪ್ರಕಾಶ್ ಶೆಟ್ಟಿ–ಜೆಡಿಎಸ್
ಸುಧಾಕರ–ಆರ್‌ಪಿಐ

ಕಾರ್ಕಳ ಕ್ಷೇತ್ರ:
ಎಚ್‌. ಗೋಪಾಲ ಭಂಡಾರಿ– ಕಾಂಗ್ರೆಸ್
ವಿ.ಸುನಿಲ್ ಕುಮಾರ್– ಬಿಜೆಪಿ
ಮಕ್ಸೂದ್ ಅಹಮ್ಮದ್– ಎಂಇಪಿ
ಉದಯ ಕುಮಾರ್–ಬಿಎಸ್‌ಪಿ
ಸುಮಂತ ಪೂಜಾರಿ–ಸ್ವತಂತ್ರ
ಅಬ್ದುಲ್ ಅಜೀಜ್– ಸ್ವತಂತ್ರ
ಅಶ್ರಫ್ ಅಲಿ– ಸ್ವತಂತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.