ADVERTISEMENT

ತುಳು ಭಾಷೆ ಉಳಿಸುವಲ್ಲಿ ಸ್ಪಷ್ಟತೆ ಇಲ್ಲ: ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2017, 5:30 IST
Last Updated 18 ಡಿಸೆಂಬರ್ 2017, 5:30 IST

ಉಡುಪಿ: ಪೋಷಕರು ನಿತ್ಯ ಬದುಕಿನ ಒತ್ತಡಗಳ ನಡುವೆ ತಮ್ಮ ಮಕ್ಕಳಿಗೆ ತುಳು ಸಂಸ್ಕೃತಿ ಕಲಿಸುವುದನ್ನು ಮರೆತಿದ್ದಾರೆ. ಆದ್ದರಿಂದ ತುಳುವಿಗರಿಗೆ ತುಳು ಭಾಷೆ ಉಳಿಸುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಉದ್ಯಮಿ  ಉದಯ ಕುಮಾರ್ ಶೆಟ್ಟಿ ತಿಳಿಸಿದರು.

ತುಳುಕೂಟ, ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ತುಳು ಸಂಘದ ಭಾನುವಾರ ಆಯೋಜಿಸಿದ್ದ ತುಳು ಮಿನದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶತಮಾನಗಳಿಂದ ಬೆಳೆದು ಬಂದ ತುಳು ಭಾಷೆಗೆ ವಿಶೇಷ ಶಕ್ತಿ ಇದೆ. ಅದನ್ನು ಉಳಿಸುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕು. ತುಳುವರು ಇಡೀ ವಿಶ್ವದಲ್ಲಿ ಹರಡಿಕೊಂಡಿದ್ದಾರೆ. ಆದರೆ, ಅವರು ತುಳುವರಾಗಿ ಉಳಿದಿಲ್ಲ, ಅವರ ಮಕ್ಕಳಿಗೆ ತುಳು ಭಾಷೆಯಾಗಲಿ ಸಂಸ್ಕೃತಿಯಾಗಲಿ ಗೊತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ರಂಜನ್, ಮಲ್ಪೆ ಯಾಂತ್ರಿಕ ಟ್ರಾಲ್ ಬೋಟ್ ಸಹಕಾರಿ ಸಂಘದ ಗುಂಡು ಬಿ.ಅಮೀನ್, ಮಲ ಬಾರ್ ಗೋಲ್ಡ್ ಆಂಡ್ ಡೈಮಂಡ್‌ನ ಉಡುಪಿ ಸ್ಟೋರ್ ಹೆಡ್ ಹಫೀರ ರೆಹಮಾನ್ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಅಂದ್ರಾದೆ, ಪ್ರೌಢಶಾಲಾ ಮುಖ್ಯಸ್ಥ ವಿಶ್ವನಾಥ ಬಾಯರಿ, ತುಳುಕೂಟದ ಕೋಶಾಧಿಕಾರಿ ಚೈತನ್ಯ ಎಂ.ಜಿ. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.