ADVERTISEMENT

‘ನಮ್ಮ ನಡೆ ಸ್ವಚ್ಛತೆ ಕಡೆ’ ಕಾರ್ಯಕ್ರಮ

ಸ್ವಚ್ಛತೆ, ಪರಿಸರ ಕಾಳಜಿಗೆ ಗೀತಾನಂದ ಫೌಂಡೇಶನ್ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 4:31 IST
Last Updated 5 ಮಾರ್ಚ್ 2018, 4:31 IST

ಕೋಟ (ಬ್ರಹ್ಮಾವರ): ಪರಿಸರ ಸಂರಕ್ಷಣೆ ಹಾಗೂ ಸಚ್ಛತಾ ಕಾರ್ಯದಲ್ಲಿ ಹಲವಾರು ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಾ ಇದೆ. ಇದೀಗ ಮಣೂರಿನ ಗೀತಾನಂದ ಫೌಂಡೇಶನ್ ಇದೀಗ ಕೋಟ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ದಾಪುಗಾಲು ಹಾಕಿದೆ.

ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಂಪಿಂಗ್ ಯಾರ್ಡ್ ಆಗಿ ನಿರ್ಮಾಣಗೊಳ್ಳುತ್ತಿರುವ ಪ್ರದೇಶದಲ್ಲಿ ಗೀತಾನಂದ ಫೌಂಡೇಶನ್ ವತಿಯಿಂದ ಭಾನುವಾರ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಮಾತ್ರವಲ್ಲ, ನಿರಂತರವಾಗಿ ಪರಿಸರ ಸ್ನೇಹಿ ಹಾಗೂ ಸ್ವಚ್ಛ ಗ್ರಾಮವನ್ನಾಗಿಸಿ ಇರಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದೆ.

ಕೋಟ ಪಡುಕೆರೆಯ ಲಕ್ಷ್ಮೀ ಸೋಮಬಂಗೇರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸಾಸ್ತಾನ ಮಿತ್ರ ಬಳಗ ಹಾಗೂ ಪಂಚಾಯಿತಿಯ ಸಹಯೋಗದೊಂದಿಗೆ ಸ್ಫೂರ್ತಿ ಶೀರ್ಷಿಕೆಯಡಿ ‘ನಮ್ಮ ನಡೆ ಸ್ವಚ್ಛತೆ ಕಡೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಪ್ರಮೋದ್ ಹಂದೆ, ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ, ಜನತಾ ಫಿಶ್‌ಮಿಲ್‌ನ ಶ್ರೀನಿವಾಸ್ ಕುಂದರ್, ಜನತಾ ಫಿಶ್ ಮಿಲ್‌ನ ಸಮಾಜ ಕಾರ್ಯ ವಿಭಾಗದ ರವಿಕಿರಣ್ ಕಾಂಚನ್, ಕೀರ್ತಿ ಕದ್ರಿಕಟ್ಟು, ವಾಹಿನಿ ಯುವಕ ಮಂಡಲ ಪಡುಕೆರೆಯ ಅಧ್ಯಕ್ಷ ರಮೇಶ್ ಎಚ್.ಕುಂದರ್, ಉಪನ್ಯಾಸಕ ರವಿಶಂಕರ್, ರಾಜು, ಕೋಟ ಗ್ರಾಮ ಪಂಚಾಯಿತಿ ಸದಸ್ಯ ಭುಜಂಗ ಗುರಿಕಾರ, ಪ್ರಗತಿಪರ ಕೃಷಿಕ ಜೈರಾಂ ಶೆಟ್ಟಿ ಪಡುಕರೆ, ಸಾಸ್ತಾನ ಮಿತ್ರರು ಬಳಗದ ಹ.ರಾ ವಿನಯಚಂದ್ರ ಕಾರ್ಯಕ್ರಮ ಸಂಯೋಜಕಿ ವೈಷವಿ ರಕ್ಷಿತ್ ಕುಂದರ್ ಉಪಸ್ಥಿತರಿದ್ದರು.

ADVERTISEMENT

**

ಹಸಿರು ಅಭಿಯಾನದ ಕಹಳೆ

ಸಂಸ್ಥೆ ಕೇವಲ ಉದ್ಯಮ ರಂಗಕ್ಕೆ ಸೀಮಿತವಾಗಿರದೇ, ಅನೇಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಪ್ರತಿವರ್ಷ 5ರಿಂದ 10ಸಾವಿರ ಸಸ್ಯಗಳನ್ನು ವಿತರಿಸಿ ಆಯಾ ಸಂಘ ಸಂಸ್ಥೆಗಳ ಮೂಲಕ ಹಸಿರು ಅಭಿಯಾನದ ಕಹಳೆ ಮೊಳಗಿಸುತ್ತಿದ್ದೇವೆ. ಮಹಾತ್ಮ ಗಾಂಧಿ ಕಂಡ ರಾಮರಾಜ್ಯದ ಕನಸು ಹಾಗೂ ಪ್ರಧಾನಿಯ ಸ್ವಚ್ಛ ಭಾರತದ ನಿಲುವಿಗೆ ಫೌಂಡೇಶನ್ ಮೂಲಕ ಚಾಲನೆ ನೀಡಿದ್ದೇವೆ ಎನ್ನುತ್ತಾರೆ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ್ ಸಿ. ಕುಂದರ್.

**

ಪರಿಸರ ಕಾಳಜಿಯೊಂದಿಗೆ ಸ್ವಚ್ಛತೆ, ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ನೀರಿನ ಸಮಸ್ಯೆಯ ಬಗ್ಗೆ ಕಾಳಜಿಯೂ ಅಗತ್ಯವಾಗಿದೆ.
–ಹ.ರಾ.ವಿನಯಚಂದ್ರ, ಸಾಸ್ತಾನ ಮಿತ್ರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.