ಬ್ರಹ್ಮಾವರ: ಸನಾತನ ಧರ್ಮದಿಂದಲೇ ಭಾರತೀಯರಲ್ಲಿ ಧಾರ್ಮಿಕ ಭಾವನೆ ಬೆಳೆದಿದೆ. ಪ್ರತಿಯೊಬ್ಬರಲ್ಲೂ ಸಾತ್ವಿಕ ಶಕ್ತಿ, ಸತ್ಯ, ನೀತಿ, ಸದ್ಗುಣಗಳು ಇದ್ದರೆ ಮಾತ್ರ ಜಗತ್ತು ಉಳಿಯಲು ಸಾಧ್ಯ. ಸನಾತನ ಧರ್ಮದ ಪ್ರತೀಕವಾದ ನಾಗಾರಾಧನೆಯಿಂದ ಇವೆಲ್ಲವನ್ನು ನಾವು ಇಂದಿಗೂ ಸಮಾಜದಲ್ಲಿ ಕಾಣುತ್ತಿದ್ದೇವೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ನೀಲಾವರ ಮಹಿಷಮರ್ಧಿನಿ ದೇವಸ್ಥಾನದ ಸನ್ನಿಧಿಯಲ್ಲಿ ಮಂಗಳವಾರ ಅಷ್ಟಪವಿತ್ರ ನಾಗಮಂಡಲ ಸೇವೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ ಆರೋಗ್ಯದ ಅಧಿದೇವತೆ, ನಮ್ಮ ನಂಬಿಕೆ ಅರ್ಥ ಮಾಡಿಸಿಕೊಳ್ಳುವ ಏಕೈಕ ಭಗವಂತ ನಾಗ ಎಂದರು.
ಬಾಳೇಕುದ್ರು ಶ್ರೀಮಠದ ನೃಸಿಂಹಾಶ್ರಮ ಸ್ವಾಮೀಜಿ ಮಾತನಾಡಿ ಸಂಸ್ಕಾರ, ಸಂಸ್ಕೃತಿ ಉಳಿಸುವ ಪ್ರಯತ್ನ ಎಲ್ಲರಿಂದಲೂ ಆಗಲಿ ಎಂದರು.
ಶಾಸಕ ಕೆ.ರಘುಪತಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಂದಾರ್ತಿ ದೇವಳದ ಆಡಳಿತ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ, ಅರಸಮ್ಮನಕಾನಿನ ಬಿ.ಚಂದ್ರಶೇಖರ್ ಶೆಟ್ಟಿ, ನಾಗರ್ತಿಕಾನಿನ ಗಿರೀಶ್ ಅಡಿಗ, ಚೋರಾಡಿಯ ನೀಲಕಂಠ ಅಡಿಗ, ನೀಲಾವರ ದೇವಳದ ಆಡಳಿತ ಮೊಕ್ತೇಸರ ಬಿ.ಸುಪ್ರಸಾದ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಪುರದಸ್ವಾಮಿ, ಸೇವಾಕರ್ತ ನಾಗರಾಜ ಶೆಟ್ಟಿ ಮಕ್ಕಿತೋಟ, ನೀಲಾವರ ದೇವಳದ ಮಾಜಿ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ದಿನಕರ ಶೆಟ್ಟಿ, ಕುಶಲ ಶೆಟ್ಟಿ, ನೀಲಾವರ ದೇವಳದ ಪ್ರಧಾನ ಅರ್ಚಕ ಮಹಾದೇವ ಅಡಿಗ, ಶ್ರೀಲೋಲ ಅಡಿಗ, ವಿಠಲ ಶೆಟ್ಟಿ, ಗೌರಿ, ಆರೂರು ತಿಮ್ಮಪ್ಪ ಶೆಟ್ಟಿ, ಪ್ರಭಾಕರ್ ನೀಲಾವರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.