ಬ್ರಹ್ಮಾವರ: ಕೊರಗ ಸಮುದಾಯ ಅತ್ಯಂತ ಮುಗ್ಧ ಸಮಾಜ. ಸ್ವಾತಂತ್ರ್ಯಾ ನಂತರ ದೇಶ ಅಭಿವೃದ್ಧಿ ಹೊಂದಿದರೂ ಹಲವು ಕಟ್ಟುಪಾಡುಗಳಿಂದ ಜನರಲ್ಲಿ ತಾರತಮ್ಯ ಜೀವಂತವಾಗಿದ್ದು, ಈ ಎಲ್ಲಾ ತಾರತಮ್ಯವನ್ನು ಪ್ರತಿಭಟಿಸುವ ಮನೋಭಾವ ಜನರಲ್ಲಿ ಬೆಳೆಯಬೇಕು ಎಂದು ಉದ್ಯಮಿ ಪ್ರಮೋದ್ ಮಧ್ವರಾಜ್ ಹೇಳಿದರು.
ವಾರಂಬಳ್ಳಿ ತೆಂಕುಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಕೊರಗಜ್ಜ ಕಲಾತಂಡಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿರಿಯರಾದ ನಾರಾಯಣ ಮಾಸ್ಟರ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಬ್ಯಾಂಡ್ ಸೆಟ್‌ಗಳು ಹುಟ್ಟಿಕೊಂಡು ಜನರನ್ನು ಮರಳು ಮಾಡುತ್ತಿವೆ. ಆದರೆ ಶತಮಾನದಷ್ಟು ಹಳೆಯದಾದ ಡೋಲಿನಿಂದ ಹೊರಹೊಮ್ಮುವ ನಾದ ಬೇರೆ ಯಾವುದೇ ವಾದ್ಯಕ್ಕೂ ಸಾಟಿಯಲ್ಲ ಎಂದು ಹೇಳಿದರು.
ಉದ್ಯಮಿ ರಾಜೇಶ್ ಶೆಟ್ಟಿ ಬಿರ್ತಿ, ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ನಾರಾಯಣ, ಶ್ಯಾಂರಾಜ್ ಬಿರ್ತಿ, ರವಿಚಂದ್ರ ಕಪ್ಪೆಟ್ಟು, ಜತ್ತ ಕೊರಗ, ಬಚ್ಚ ಕೊರಗ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.