ADVERTISEMENT

ಬೆಳ್ಮಣ್: ಮುದ್ದುಕೃಷ್ಣ ವೇಷಸ್ಪರ್ಧೆ-– ವಿಜೇತರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 9:42 IST
Last Updated 16 ಸೆಪ್ಟೆಂಬರ್ 2013, 9:42 IST

ಕಾರ್ಕಳ: ತಾಲ್ಲೂಕಿನ ನಂದಳಿಕೆ ಯಕ್ಷಲೋಕ ಯಕ್ಷಶಿಕ್ಷಣ ವಿದ್ಯಾಪೀಠ, ಪ್ರಾಥಮಿಕ ಆರೋಗ್ಯ ಕೇಂದ್ರ, ಆಜ್ಞಾ ಕ್ಲಿನಿಕ್, ಐಸಿವೈಎಂ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ಲಯನ್ಸ್, ಲಯನೆಸ್ ಕ್ಲಬ್, ಇವುಗಳ ಸಹಭಾಗಿತ್ವದಲ್ಲಿ  ಬೆಳ್ಮಣ್ ಶ್ರೀಕೃಷ್ಣ ಸಭಾ ಭವನದಲ್ಲಿ ಶನಿವಾರ ನಡೆದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಹೆಚ್ಚಿನ ಪುಟಾಣಿಗಳು ಜನರನ್ನು ಆಕರ್ಷಿಸಿದರು. ವಿಜೇತರಿಗೆ ನಗದು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಸ್ಪರ್ಧಾ ವಿಜೇತರ ವಿವರ:
- 1 ರಿಂದ 3 ವರ್ಷದೊಳಗಿನ ಮಕ್ಕಳ ನವನೀತ ಕೃಷ್ಣ ಸ್ಪರ್ಧೆ-:  ಅಖಿಲೇಶ್‌ (ಪ್ರಥಮ) ಧನುಷ್‌ (ದ್ವಿತೀಯ) ಪೂರ್ವಿಕಾ (ತೃತೀಯ)- ಮುರಳಿ ಕೃಷ್ಣ ಸ್ಪರ್ಧೆ:- ಸೆಲಿಯಾ ಮಾರ್ನಿಶ್ (ಪ್ರಥಮ) -ಶೌರೀ(ದ್ವಿತೀಯ), ಸನ್ನಿಧಿ (ತೃತೀಯ) ಗೋಪಿಕೃಷ್ಣ ಸ್ಪರ್ಧೆ:- ಆರುಷ್‌ ಹೆಗ್ಡೆ ಅನ್ವಿತಾ(ದ್ವಿತೀಯ) ಶರಣ್ಯ (ತೃತೀಯ)- ಒಂದು ವರ್ಷದೊಳಗಿನ ಸುಹಾನ್‌ಗೆ ವಿಶೇಷ ಬಹುಮಾನ ನೀಡಿ ಅಭಿನಂದಿ ಸಲಾಯಿತು.

ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ಮಾಹಿತಿ ಹಕ್ಕು ಸಮಿತಿ ಜಿಲ್ಲಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಶಿರ್ವ, ನಂದಳಿಕೆ ಲಕ್ಷ್ಮೀಜನಾರ್ದನ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕ ಭುಜಂಗ ಶೆಟ್ಟಿ, ಸುಧಾಕರ ಅಚಾರ್ಯ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಜಿತೇಶ್ ಶೆಟ್ಟಿ ನಂದಳಿಕೆ, ಜಯ ಪೂಜಾರಿ, ಸಹನಾ ಕುಂದರ್, ಸ್ವಾತಿ ಶೆಟ್ಟಿ, ಆದಿತ್ಯ ನಂದಳಿಕೆ, ಯೋಗೀಶ್ ದೇವಾಡಿಗ, ವಿರೇಶ್ ಶೆಟ್ಟಿ ಇದ್ದರು.
ನಿರ್ಣಾಯಕರಾಗಿ  ಗುರುಚರಣ್, ಹರಿಪ್ರಸಾದ್, ಜಯಶ್ರೀ ಸಹಕರಿಸಿದರು.

  ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಯಕ್ಷಲೋಕ ಯಕ್ಷಶಿಕ್ಷಣ ವಿದ್ಯಾಪೀಠದ ನಿರ್ದೇಶಕ ನಂದಳಿಕೆ ಜನಾರ್ದನ ಶಾಸ್ತ್ರೀ ವಹಿಸಿದ್ದರು.
ಸಂಘಟಕ ರವಿರಾಜ್ ಶೆಟ್ಟಿ ಸ್ವಾಗತಿಸಿದರು. ವೀಣೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.