ADVERTISEMENT

ಮರವಂತೆ ಶಾಲೆಗೆ ಸ್ಮಾರ್ಟ್‌ಕ್ಲಾಸ್ ಭಾಗ್ಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 8:52 IST
Last Updated 4 ಅಕ್ಟೋಬರ್ 2017, 8:52 IST

ಬೈಂದೂರು: ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಿಂದಿನ ವಿದ್ಯಾರ್ಥಿ ಸತ್ಯನಾರಾಯಣ ಹೊಳೆಬಾಗ್ಲು ಸುಮಾರು ₹1 ಲಕ್ಷ ಮೌಲ್ಯದ ಸ್ಮಾರ್ಟ್‌ಕ್ಲಾಸ್ ತಂತ್ರಜ್ಞಾನ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ್ದು ಅದನ್ನು ಅವರು ಮಂಗಳವಾರ ಉದ್ಘಾಟಿಸಿ, ಶಾಲೆಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಶಾಲೆಯ ಹಳೆ ವಿದ್ಯಾರ್ಥಿಗಳಿಗೆ ಕಲಿತ ಶಾಲೆಯ ಋಣ ತೀರಿಸಬೇಕಾದ ಹೊಣೆ ಇದೆ. ಅಲ್ಲಿ ಹಲವು ಕೊರತೆಗಳು ಮತ್ತು ಅಗತ್ಯಗಳು ಇರುತ್ತವೆ. ಅವರು ಅವುಗಳನ್ನು ಹೊಂದಿಸಲು ಮುಂದೆ ಬಂದರೆ ಶಾಲೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದರು.

ಶಿಕ್ಷಣ ಇಲಾಖೆಯ ಪರವಾಗಿ ಕೊಡುಗೆಯನ್ನು ಸ್ವೀಕರಿಸಿದ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಮಾತನಾಡಿ ಮರವಂತೆ ಶಾಲೆಯ ಹಳೆವಿದ್ಯಾರ್ಥಿ ಸಂಘ ಸಕ್ರಿಯವಾಗಿದ್ದು ಕಳೆದ ವರ್ಷ ಶಾಲೆಗೆ ಬಸ್ ಕೊಡುಗೆ ನೀಡುವ ಮೂಲಕ ರಾಜ್ಯವ್ಯಾಪಿ ಗಮನ ಸೆಳೆದಿದೆ.

ADVERTISEMENT

ಶಾಲೆಯಲ್ಲಿ ವಿದ್ಯಾರ್ಥಿ ಸಂಖ್ಯೆ ಹೆಚ್ಚಳಕ್ಕೆ ಕೆಲವು ಉಪಕ್ರಮಗಳನ್ನು ಕೈಗೊಂಡಿದೆ. ಈಗ ಹಳೆ ವಿದ್ಯಾರ್ಥಿ ಸತ್ಯನಾರಾಯಣ ವೈಯಕ್ತಿಕ ನೆಲೆಯಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇದು ಬೋಧನೆ ಮತ್ತು ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸಹಕಾರಿಯಾಗುತ್ತದೆ.

ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲು ಕೆಲವು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಕಾರ್ಯಗತಗೊಳಿಸಲು ಹಳೆ ವಿದ್ಯಾರ್ಥಿಗಳು ನೆರವು ನೀಡಬೇಕು ಎಂದು ಹೇಳಿ ದಾನಿಗೆ ಕೃತಜ್ಞತೆ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್. ಕೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಬಳೇಗಾರ್, ಕಾರ್ಯದರ್ಶಿ ರವಿ ಮಡಿವಾಳ, ಗೌರವಾಧ್ಯಕ್ಷ ಎಸ್. ಜನಾರ್ದನ, ಪದಾಧಿಕಾರಿಗಳು ಮತ್ತು ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ ಪೂಜಾರಿ, ಮಾಜಿ ಅಧ್ಯಕ್ಷ ಸೋಮಯ್ಯ ಬಿಲ್ಲವ, ಸದಸ್ಯರು, ಹೊಳೆಬಾಗ್ಲು ಕುಟುಂಬದ ಹಿರಿಯರಾದ ರಾಮಕೃಷ್ಣ ಹೊಳೆಬಾಗ್ಲು ಮತ್ತು ಇತರ ಸದಸ್ಯರು, ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.