ADVERTISEMENT

ಮಾನವ ತೋಳುಗಳನ್ನು ಅನುಕರಿಸುವ ರೋಬೋಟ್

ಬಂಟಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 4:19 IST
Last Updated 25 ಮೇ 2018, 4:19 IST
ಬಂಟಕಲ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಅವಿಷ್ಕರಿಸಿರುವ ಮಾನವ ತೋಳುಗಳನ್ನು ಅನುಕರಿಸುವ ರೋಬೋಟ್.
ಬಂಟಕಲ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಅವಿಷ್ಕರಿಸಿರುವ ಮಾನವ ತೋಳುಗಳನ್ನು ಅನುಕರಿಸುವ ರೋಬೋಟ್.   

ಶಿರ್ವ: ಅನುಕರಣೆಯನ್ನು  ರೋಬೋಟುಗಳಿಗೂ ಅಳವಡಿಸಿ ಒಂದು ಹೊಸ ಮಾದರಿಯನ್ನು ಬಂಟಕಲ್ಲಿನ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ.

ರೊಬೋಟಿಕ್ ತಂತ್ರಜ್ಞಾನದಲ್ಲಿ ಮಾನವರ ಅನುಕರಣೆ ಹೆಚ್ಚಾಗಿ ಮನುಷ್ಯನ ದೇಹದ ಮೇಲೆ ಅಳವಡಿಸಿದ ಸೆನ್ಸರ್ ಅಥವಾ ನಿಯಂತ್ರಕಗಳ ಮುಖಾಂತರ ಜರಗುತ್ತವೆ. ಆದರೆ ಈ ವಿನ್ಯಾಸದಲ್ಲಿ ಸೆನ್ಸರುಗಳ ಬಳಕೆಯಿಲ್ಲದೇ ಕೇವಲ ಮನುಷ್ಯನು ಮಾಡುವ ಚಲನೆಯನ್ನು ವೀಡಿಯೋದಲ್ಲಿ ನೋಡಿ ರೋಬೋಟ್ ಅದನ್ನೇ ಯಥಾವತ್ ಅನುಕರಿಸುತ್ತದೆ.

ಕೈನೆಕ್ಟ್ ಹಾಗೂ ಡೆಪ್ತ್ ಸೆನ್ಸಿಂಗ್ ತಂತ್ರಜ್ಞಾನದ ಸಹಾಯದಿಂದ ಅಭಿವೃದ್ಧಿಪಡಿಸಲಾದ ಈ ರೋಬೋಟನ್ನು ಬಾಂಬ್ ನಿಷ್ಕ್ರಿಯಗೊಳಿಸುವುದು, ಭಾರ ಎತ್ತುವುದು, ಬೆಂಕಿಯನ್ನು ನಂದಿಸುವುದು, ಮತ್ತು ಶಸ್ತ್ರಚಿಕಿತ್ಸೆಯಲ್ಲೂ ಕೂಡಾ ಬಳಸಬಹುದಾಗಿದೆ. ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಸಂದೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ  ರಾಹುಲ್ ಹೆಬ್ಬಾರ್, ಸಾಗರ್ ಸುಜೀರ್, ಶಶಾಂಕ್ ಮತ್ತು ರೋಹಿತ್ ಪ್ರಭು ಈ ರೋಬೋಟನ್ನು ಸಿದ್ಧಪಡಿಸಿರುತ್ತಾರೆ.

ADVERTISEMENT

ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ತಾಂತ್ರಿಕ ಮಾದರಿಗಳ ವಿದ್ಯಾರ್ಥಿಗಳ ಈ ತಂಡವು ಪ್ರಥಮ ಬಹುಮಾನವನ್ನು ಗೆದ್ದಿರುತ್ತದೆ. ವಿಭಾಗ ಮುಖ್ಯಸ್ಥರಾದ ಡಾ. ಬಾಲಚಂದ್ರ ಆಚಾರ್, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮತ್ತು ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿಗಳ  ಈ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.