ADVERTISEMENT

ರಕ್ತದಾನದಿಂದ ಆರೋಗ್ಯ ಸುಧಾರಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 8:35 IST
Last Updated 20 ಮಾರ್ಚ್ 2012, 8:35 IST

ಕಾರ್ಕಳ: `ರಕ್ತದಾನವು ಆಪತ್ಕಾಲದಲ್ಲಿ ಸಹಾಯ ಮಾಡುವ ವಿಧಾನ. ರಕ್ತ ದಾನದಿಂದ ರಕ್ತ ನೀಡುವ ವ್ಯಕ್ತಿಯ ಆರೋಗ್ಯವೂ ಸುಧಾರಣೆ ಆಗಲಿದೆ~ ಎಂದು ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ಪಾಂಡುರಂಗ ನಾಯಕ್ ಇಲ್ಲಿ ತಿಳಿಸಿದರು.

ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ ಘಟಕ, ಜೆಸಿಐ, ಜೇಸಿರೇಟ್, ಜೂನಿಯರ್ ಜೇಸಿ, ರೋಟರಿ ಕ್ಲಬ್ ಮತ್ತು ರೋಟರ‌್ಯಾಕ್ಟ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಉದ್ಘಾಟಿಸಿ   ಅವರು ಮಾತನಾಡಿ ದರು.

ಕಾಲೇಜಿನ ವಿಶ್ವಸ್ಥಮಂಡಳಿಯ ಸದಸ್ಯ ಡಾ.ಭರತೇಶ್, ಜೆಸಿಐ ಅಧ್ಯಕ್ಷ ಕೆ.ದಿನೇಶ್, ಜೇಸಿರೇಟ್ ಅಧ್ಯಕ್ಷೆ ರಂಜಿತಾ ಸಂತೋಷ್, ಜೂನಿಯರ್ ಜೇಸಿ ಅಧ್ಯಕ್ಷ ಸಚಿನ್ ಬಂಗೇರ, ರೋಟರಿ ಕ್ಲಬ್ ಅಧ್ಯಕ್ಷ ಅಭಯ ಕುಮಾರ್, ರೋಟರ‌್ಯಾಕ್ಟ್ ಕ್ಲಬ್‌ನ  ಅಧ್ಯಕ್ಷ ಇಕ್ಬಾಲ್ ಅಹಮದ್, ಲಯನ್ಸ್ ಕ್ಲಬ್‌ನ ಅಧ್ಯಕ್ಷ ಡಾ.ಸತೀಶ್ ಶೆಟ್ಟಿ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ ಘಟಕದ ಅಧಿಕಾರಿಗಳು, ಪ್ರಾಧ್ಯಾಪಕ ಸುಧೀಂದ್ರ ಶಾಂತಿ ಮತ್ತಿತರರಿದ್ದರು.

ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಬ್ಲಡ್ ಬ್ಯಾಂಕ್ ಸಿಬ್ಬಂದಿ ಶಿಬಿರವನ್ನು ನಡೆಸಿಕೊಟ್ಟರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.