ADVERTISEMENT

‘ಸಮಸ್ಯೆಗಳನ್ನು ಎದುರಿಸಲು ಆಂತರಿಕ ಶಕ್ತಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 10:27 IST
Last Updated 5 ಅಕ್ಟೋಬರ್ 2017, 10:27 IST

ಕಾರ್ಕಳ: ವಿದ್ಯಾರ್ಥಿಗಳು ಮುಂದೆ ತಮ್ಮ ಜೀವನದಲ್ಲಿ ಹಲವಾರು ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ. ಅದನ್ನು ಎದುರಿಸಲು ಆಂತರಿಕ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ ತಿಳಿಸಿದರು.

ನಗರದ ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 44ನೇ ವರ್ಷದ ‘ನೈತಿಕ ಮತ್ತು ಆಧ್ಯಾತ್ಮಿಕ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಎರಡು ರೀತಿಯ ವಿದ್ಯಾಭ್ಯಾಸ ಪಡೆಯಬೇಕು. ಒಂದು ವಿದ್ಯಾ ಸಂಸ್ಥೆ ನೀಡುವ ಬಾಹ್ಯ ಶಿಕ್ಷಣ ವಾದರೆ ಇನ್ನೊಂದು ಆಂತರಿಕ ವಿದ್ಯಾ ಭ್ಯಾಸ. ಅಂದರೆ ಆಧ್ಯಾತ್ಮಿಕ ವಿದ್ಯೆ. ವಿದ್ಯಾ ರ್ಥಿಗಳಿಗೆ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಅಗತ್ಯ. ವಿದ್ಯಾರ್ಥಿಯೊಬ್ಬ ಉನ್ನತ ಶಿಕ್ಷಣವನ್ನು ಪಡೆದುಕೊಂಡಿದ್ದಾನೆಂದರೆ ಎಲ್ಲಾ ವಿಷಯವನ್ನು ತಿಳಿದು ಕೊಂ ಡಿದ್ದಾನೆ ಎಂದೇನಿಲ್ಲ. ಉನ್ನತ ಶಿಕ್ಷಣ ಎಂದರೆ ವಿಷಯವನ್ನು ಗ್ರಹಿಸಿಕೊಂಡಿ ದ್ದಷ್ಟೆ, ಅದನ್ನು ಜೀವನದಲ್ಲಿ ಅಳವಡಿ ಸಿಕೊಂಡಾಗ ಮಾತ್ರ ಉನ್ನತ ಶಿಕ್ಷಣ ಹಾಗೂ ವಿದ್ಯಾಭ್ಯಾಸಕ್ಕೆ ಸರಿಯಾದ ಅರ್ಥ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.

ಮನುಷ್ಯನಿಗೆ ಜೀವನದಲ್ಲಿ ಮೌಲ್ಯ ಗಳ ಅವಶ್ಯಕತೆಯಿದ್ದು, ಆತನಿಗೆ ಬೆಲೆ ಬರುವುದೇ ಮೌಲ್ಯಗಳಿಂದ. ಆದರೆ ಇಂದಿನ ದಿನಗಳಲ್ಲಿ ಮೌಲ್ಯಗಳ ಕೊರತೆ ಇದೆ. ಜೀವನದಲ್ಲಿ ಮೌಲ್ಯಗಳನ್ನು ಅಳ ವಡಿಕೊಂಡಾಗ ಯಶಸ್ಸು ಸಾಧಿಸುತ್ತಾನೆ ಎಂದರು.

ADVERTISEMENT

ಉಪನ್ಯಾಸಕ ಡಾ. ಪ್ರಭಂಜನಾ ಚಾರ್ಯ ‘ಭೀಮನ ಪಾತ್ರದಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು’ ಹಾಗೂ ಡಾ. ವೆಂಕಟರಮಣ ಭಟ್ಟ ‘ರಾಮಾ ಯಣದಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳು’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್, ಆಡಳಿತ ಮಂಡಳಿಯ ಸದಸ್ಯ ಸಿ.ಎ. ಶಿವಾನಂದ್ ಪೈ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್‌.ಸಿ., ಸಾಹಿತಿ ಜಯಪ್ರಕಾಶ್ ಮಾವಿನಕುಳಿ, ಕಾರ್ಯಕ್ರಮ ಸಂಯೋ ಜಕ ಡಾ. ಮಂಜುನಾಥ್ ಭಟ್ ಇದ್ದರು. ಉಪನ್ಯಾಸಕ ನಾಗಭೂಷಣ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.