ADVERTISEMENT

ಸಮುದ್ರ ಪಾಲಾಗುವ ಭೀತಿಯಲ್ಲಿ ರಸ್ತೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 10:35 IST
Last Updated 8 ಜುಲೈ 2013, 10:35 IST

ಪಡುಬಿದ್ರಿ: ಕೆಲವು ದಿನಗಳಿಂದ ಸುರಿ ಯುತ್ತಿರುವ ಮಳೆಯಿಂದ ಎರ್ಮಾಳು ತೆಂಕ ಗ್ರಾಮ ಪಂಚಾಯ್ತಿ ಯಾದ್ಯಂತ ಕಡಲುಕೊರೆತ ಕಾಣಿಸಿಕೊಂಡಿದ್ದು, ತೆಂಕ ದಲ್ಲಿ ಮೀನುಗಾರಿಕಾ ರಸ್ತೆ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.

ತೆಂಕ ಗ್ರಾಮದ ಅಮೀನ್ ಮೂಲಸ್ಥಾನ ಬಳಿ ಸಮುದ್ರದ ಬೃಹತ್ ಅಲೆಗಳು ತೀರದಲ್ಲಿ ಹಾಕಿರುವ ಕಲ್ಲು ಗಳಿಗೆ ಅಪ್ಪಳಿಸುತ್ತಿದೆ. ಕೃಷ್ಣ ಕೋಟ್ಯಾನ್ ಎಂಬವರ ಫಲಭರಿತ 3ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಮತ್ತಷ್ಟು ತೆಂಗಿನ ಮರಗಳು ಸಮುದ್ರ ಪಾಲಾಗುವ ಭೀತಿ ಎದುರಾಗಲಿದೆ.

ತೆಂಕ-ಬಡಾ-ಪಡುಬಿದ್ರಿ ಕೂಡು ರಸ್ತೆಗೆ ಕಳೆದ ವರ್ಷವಷ್ಟೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದ್ದು, ಸಮುದ್ರ ಪಾಲಾಗುವ ಭೀತಿ ಇದೆ.

ಯುಪಿಸಿಎಲ್ ಸಮುದ್ರ ನೀರು ಸೆಳೆಯಲು ಅಳವಡಿಸಲಾದ ತಾತ್ಕಾಲಿಕ ಬ್ರೇಕ್ ವಾಟರ್‌ನಿಂದ ದಕ್ಷಿಣಕ್ಕೆ ತೆಂಕ ಗ್ರಾಮದಾದ್ಯಂತ ಕಡಲ್ಕೊರೆತ ಹೆಚ್ಚಾಗಿದೆ. ಶ್ರೀಧರ ಮೆಂಡನ್ ಎಂಬವರ ಮನೆ ಬಳಿ ರಸ್ತೆ ಮೇಲೆ ಸಮುದ್ರ ತೆರೆಗಳು ಅಪ್ಪಳಿಸುತ್ತಿದ್ದು, ಯಮುನಾ ನಿವಾಸ ಎಂಬ ಮನೆಗೂ ಅಪಾಯ ಸಂಭವಿಸುವ ಭೀತಿ ಎದುರಾಗಿದೆ.  ಗ್ರಾಮದಾದ್ಯಂತ ಅಲ್ಲಲ್ಲಿ ಸಮುದ್ರ ಅಲೆಗಳು ರಸ್ತೆ ದಾಟಿ ತೋಟಕ್ಕೆ ನುಗ್ಗುತ್ತಿವೆ. ಇಲ್ಲಿಯೇ ಸಮೀ ಪದ ತೊಟ್ಟಂನಲ್ಲಿ ಕಳೆದ ವಾರ ಉಂಟಾದ ಕಡಲ್ಕೊರೆತದಿಂದ ಮೀನು ಗಾರಿಕಾ ರಸ್ತೆ ಸಮುದ್ರ ಪಾಲಾಗಿದ್ದು, ಇದೀಗ ಸಮೀಪದ ಮತ್ತೊಂದು ರಸ್ತೆ ಸಮುದ್ರ ಪಾಲಾಗುವ ಭೀತಿಯಿಂದ ಜನರು ಆತಂಕಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.