ಉಡುಪಿ: ಜಿಲ್ಲೆಯ ವಿವಿಧ ಶಾಲಾ– ಕಾಲೇಜುಗಳು, ಸಂಘ ಸಂಸ್ಥೆಗಳು ಸೋಮವಾರ ಸ್ವಾತಂತ್ರ್ಯ ದಿನಾಚ ರಣೆಯನ್ನು ಅದ್ಧೂರಿಯಾಗಿ ಆಚರಿ ಸಿದವು.
ಪರ್ಕಳದ ನೇತಾಜಿ ಸ್ಪ್ರೋರ್ಟ್ಸ್ ಕ್ಲಬ್ ಆರೋಜಿಸಿದ್ದ ಸ್ವಾತಂತ್ರ್ಯೋತ್ಸವ ಕಾರ್ಯ ಕ್ರಮದಲ್ಲಿ ಹಿರಿಯ ನಾಗರಿಕರಾದ ಅಪ್ಪಿ ಅವರು ಧ್ವಜಾರೋಹಣ ಮಾಡಿದರು. ಸ್ವಾತಂತ್ರ್ಯ ಬಂದ ದಿನ ಹೇಗೆ ಸಂಭ್ರಮ ಆಚರಿಸಲಾಯಿತು ಎಂಬುದನ್ನು ಅವರು ವಿವರಿಸಿದರು.
ಮಣಿಪಾಲದ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಧರ್ ಹಂದ್ರಟ್ಟ ಅವರು ಮಾತನಾಡಿ, ಹಿರಿಯರು ಮಾಡಿದ ತ್ಯಾಗ– ಬಲಿದಾನದ ಪರಿಣಾಮ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಇದನ್ನು ಅರಿತು ಕೊಂಡು ನಿಜವಾದ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ ಎಂದರು. ಕ್ಲಬ್‌ನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿದರು. ಶಂಕರ್ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಕೃತಿ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಸಹ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಮಾಜಿ ಸೈನಿಕ ಜೊನ್ ವಿಲ್ಸನ್ ಅವರು ಮಾತನಾಡಿ, ಯಾವಾ ಗಲೂ ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಗುರಿ ಸಾಧನೆಯ ಕಡೆ ಚಿತ್ತ ಇರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ. ಬಿ. ಪದ್ಮನಾಭ ಗೌಡ, ಸ್ವಾತಂತ್ರ್ಯದ ಮಹತ್ವ ವನ್ನು ವಿವರಿಸಿದರು.
ಕ್ರಿಸ್ಪಿನ್ ಲೂಯಿಸ್ ಕ್ರಾಸ್ತಾ, ಆಡಳಿ ತಾಧಿಕಾರಿ ಆಕಾಶ್ ಜವಳಿ, ಪ್ರಾಂಶುಪಾಲ ರಾಘವೇಂದ್ರ ಶೆಣೈ, ಉಪ ಪ್ರಾಂಶುಪಾಲೆ ವೀಣಾ ಇದ್ದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಹಲವು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹು ಮಾನ ಹಾಗೂ ಸಿಹಿತಿಂಡಿಯನ್ನು ವಿತರಿಸಲಾಯಿತು.
ಸವಿತಾ ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕುಮಾರಿ ಮತ್ತು ಕೃಪಾ ಸ್ವಾಗತಿಸಿದರು. ಸಮೀಹಾ ವಂದ ನಾರ್ಪಣೆ ಮಾಡಿದರು.
ಉಡುಪಿಯ ಅಜ್ಜರಕಾಡಿನ ಸರ್ಕಾರಿ ನೌಕರರ ವಸತಿ ಗೃಹದ ಮೈದಾನದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಚಂದ್ರ ಶೇಖರ್ ಧ್ವಜಾರೋಹಣ ನೆರವೇರಿಸಿದರು, ವಸತಿಗೃಹದ ಎಲ್ಲಾ ನಿವಾಸಿಗಳು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಅಧ್ಯಕ್ಷ ಸುಬ್ರಹಣ್ಯ ಶೇರಿಗಾರ್ ಧ್ವಜಾರೋಹಣ ಮಾಡಿ ದರು.
ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ 70ನೇ ಸ್ವಾತಂತ್ರ್ಯೋತ್ಸ ವವನ್ನು ಸಂಭ್ರದಿಂದ ಆಚರಿಸಲಾಯಿತು. ಡಾ.ಜಿ.ಪಿ. ಶೆಟ್ಟಿ ಧ್ವಜಾರೋಹಣ ಮಾಡಿದರು. ಕಾಲೇ ಜಿನ ಪ್ರಾಂಶುಪಾಲ ಡಾ. ಮೋಹನ್ ದಾಸ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಅಕ್ಷತಾ ನಾಯ್ಕ್ ಕಾರ್ಯಕ್ರಮ ವನ್ನು ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ವಂದಿಸಿದರು.
ಮಣಿಪಾಲದ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ. ಸದಾಶಿವ ರಾವ್ ಅವರು ಧ್ವಜಾರೋಹಣ ಮಾಡಿ ದರು. ‘ಸ್ವಾತಂತ್ರ್ಯ ಮತ್ತು ಸ್ವೇಚ್ಛತೆಗೆ ವ್ಯತ್ಯಾಸವಿದೆ. ಯಾವುದೇ ಪ್ರಜೆಯು ಸಂವಿಧಾನದತ್ತವಾದ ಸ್ವಾತಂತ್ರ್ಯವನ್ನು ದುರುಪಯೋಗಿಸಿಕೊಳ್ಳದೇ, ಅಪ್ಪಟ ದೇಶಪ್ರೇಮಿಯಾಗಿರಬೇಕು’ ಎಂದು ಅವರು ಹೇಳಿದರು.
ಶಾಲಾ ಸಂಚಾಲಕ ಪಿ.ಜಿ. ಪಂಡಿತ್, ಪ್ರಾಂಶುಪಾಲೆ ಜೆಸ್ಸಿ ಆಂಡ್ರ್ಯೂಸ್ ಉಪ ಪ್ರಾಂಶುಪಾಲೆ ಶಕಿಲಾಕ್ಷಿ ಕೃಷ್ಣ, ಜ್ಯೋತಿ ಸಂತೋಷ್, ಮುಖ್ಯೋಪಾಧ್ಯಾಯಿನಿ ಉಮಾ ಕೆ ರಾವ್ ಉಪಸ್ಥಿತರಿದ್ದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಆಗಸ್ಟ್14ರಂದು ರಾತ್ರಿ ಮೊಂಬತ್ತಿ ಮೆರವಣಿಗೆ ನಡೆಸಲಾಯಿತು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು. ಘೋಷಣೆಗಳು ಹಾಗೂ ದೇಶಭಕ್ತಿ ಗೀತೆಗಳು ಕಾಲೇಜು ಹಾಗೂ ಆಸ್ಪತ್ರೆಯ ಆವರಣದಾದ್ಯಂತ ಮೊಳಗಿದವು. ಡಾ. ನಾಗಶ್ರೀ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಹಾಗೂ ಹೋರಾ ಡಿದ ವೀರ ಯೋಧರನ್ನು ಸ್ಮರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಕಾಂತ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಮುರಳೀಧರ ಶರ್ಮಾ, ಸಂಶೋ ಧನಾ ಕೇಂದ್ರದ ನಿರ್ದೇಶಕ ಡಾ. ರವಿಶಂಕರ್, ಎಸ್. ಡಿ.ಎಂ. ಆಯು ರ್ವೇದ ಫಾರ್ಮಸಿಯ ಪ್ರಧಾನ ವ್ಯವ ಸ್ಥಾಪಕ ಡಾ. ಮುರಳೀಧರ್ ಬಲ್ಲಾಳ್, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ. ಸೀಮಾ, ಆಸ್ಪತ್ರೆ ವ್ಯವಸ್ಥಾಪಕ ಶ್ರೀನಿವಾಸ ಹೆಗ್ಡೆ ಇದ್ದರು. ಕುಂಜಿಬೆಟ್ಟು ಉಪೇಂದ್ರ ಪೈ ಸ್ವಾರಕ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಲೆಕ್ಕಪರಿಶೋಧಕರ ಸಂಘದ ಮಂಗಳೂರು ಶಾಖೆಯ ಸದಸ್ಯ ನಂದಗೋಪಾಲ್ ಶೆಟ್ಟಿ ಧ್ವಜಾರೋಹಣ ಮಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಮಧುಸೂದನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ಗಣೇಶ್ ಕಾಂಚನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.