ADVERTISEMENT

‘ಸರ್ಕಾರದ ಯೋಜನೆಗಳ ಮಾಹಿತಿಯ ಅರಿವು ಅಗತ್ಯ'

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 10:17 IST
Last Updated 23 ಸೆಪ್ಟೆಂಬರ್ 2013, 10:17 IST

ಕಾರ್ಕಳ: ಸರ್ಕಾರ ಸಾರ್ವಜನಿಕರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿ ಸುತ್ತಿದ್ದು, ಜನರಿಗೆ ಇವುಗಳ ಬಗ್ಗೆ ಸೂಕ್ತ ಮಾಹಿತಿ ಸಿಗದೇ ಇರುವುದರಿಂದ ಯೋಜನೆಗಳ ಉಪಯೋಗ ಜನರಿಗೆ ತಲುಪುವುದಿಲ್ಲ. ಎಲ್ಲರೂ ಸರ್ಕಾರದ ಯೋಜನೆಗಳ ಮಾಹಿತಿಯ ಅರಿವನ್ನು ಹೊಂದಿರಬೇಕು ಎಂದು  ಕ್ರೈಸ್ಟ್ ಕಿಂಗ್ ಚರ್ಚ್‌ನ  ಧರ್ಮಗುರು ಫಾದರ್ ಜಾನ್ ಎ. ಬರ್ಬೋಜಾ ತಿಳಿಸಿದರು.

  ಇಲ್ಲಿನ ಗಾಂಧಿ ಮೈದಾನದ ಸಮೀಪದಲ್ಲಿರುವ ಕ್ರೈಸ್ಟ್ ಕಿಂಗ್ ಚರ್ಚ್‌ನ ಸಭಾ ಭವನದಲ್ಲಿ ಇತ್ತೀಚೆಗೆ ಕಾರ್ಕಳ ವಲಯ ಕಥೊಲಿಕ್ ಸಭಾ ಸಮಿತಿಯ ವತಿಯಿಂದ ನಡೆದ ಮಾಹಿತಿ ಹಕ್ಕು ಅಧಿನಿಯಮ -2005ರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಸರ್ಕಾರಕ್ಕೆ ಪಾವತಿಸುವ ತೆರಿಗೆ ಹಣವು ಏನಾಗುತ್ತದೆ, ಹೇಗೆ ಪೋಲಾಗುತ್ತದೆ, ನಿರುಪಯೋಗಿ ಯೋಜನೆಗಳಿಗೆ ಸರ್ಕಾರದ ಹಣ ವ್ಯರ್ಥವಾಗುತ್ತದೆಯೇ? ಮೊದಲಾ ದವುಗಳನ್ನು ತಿಳಿದುಕೊಳ್ಳಲು ಮಾಹಿತಿ ಹಕ್ಕು ಕಾಯ್ದೆ ಉಪಯುಕ್ತ ಎಂದರು. 

ತೀರ್ಥಹಳ್ಳಿಯ ಮಾಹಿತಿ ಹಕ್ಕು ಕಾರ್ಯಕರ್ತ ವಿನ್ಸೆಂಟ್ ಡಿ'ಮೆಲ್ಲೊ  ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯ ಉಪಯೋಗವನ್ನು ಸಾರ್ವಜನಿಕರು ಹೇಗೆ ಪಡೆದುಕೊಳ್ಳ ಬಹುದು ಎನ್ನುವುದನ್ನು ವಿವರಿಸಿದರು.

ಉಡುಪಿ ಪ್ರದೇಶ್ ಕೆಥೊಲಿಕ್ ಸಭಾದ ನಿಯೋಜಿತ ಅಧ್ಯಕ್ಷ ವಿಲಿಯಂ ಮಚಾದೊ, ಕೇಂದ್ರೀಯ ಸಮಿತಿಯ ಸಹ-ಖಜಾಂಚಿ ಸಾಲೊಮನ್ ಆಲ್ವಾರಿಸ್ ಕಾರ್ಕಳ, ವಲಯ ಕಾರ್ಯದರ್ಶಿ ಎಲ್ಸಿ ಡಿಸೋಜ ಹಾಗೂ ಮಾಜಿ ಅಧ್ಯಕ್ಷೆ ಲೀನಾ ಮಿನೇಜಸ್, ಹೆನ್ರಿ ಸಾಂತುಮೇಯರ್  ಇದ್ದರು.

   ವಲಯ ಅಧ್ಯಕ್ಷ ಶ್ರೀ ಮೆಕ್ಸಿಂ ಡಿಮೆಲ್ಲೊ ಅತಿಥಿಗಳನ್ನು ಸ್ವಾಗತಿಸಿದರು. ಐರಿನ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.