ADVERTISEMENT

ರವಿ ಪೂಜಾರಿ ವಿರುದ್ಧ ಉಡುಪಿಯಲ್ಲಿ 10 ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 14:47 IST
Last Updated 1 ಫೆಬ್ರುವರಿ 2019, 14:47 IST

ಉಡುಪಿ: ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಈಚೆಗೆ ಇಂಟರ್‌ಪೋಲ್‌ ಪೊಲೀಸರ ಬಲೆಗೆ ಬಿದ್ದಿರುವ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಉಡುಪಿ ಜಿಲ್ಲೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜೀವ ಬೆದರಿಕೆ ಸೇರಿದಂತೆ ಹಲವು ಆರೋಪಗಳಡಿ 10 ಪ್ರಕರಣಗಳು ದಾಖಲಾಗಿವೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.

ರವಿ ಪೂಜಾರಿ ಭೂಗತವಾಗಿದ್ದುಕೊಂಡರೂ ಉಡುಪಿ ಜಿಲ್ಲೆಯ ಮೇಲೆ ಪ್ರಭಾವ ಹೊಂದಿದ್ದ. ಉದ್ಯಮಿಗಳಿಗೆ ಹಣಕ್ಕಾಗಿ ಬೇಡಿಕೆ ಹಾಗೂ ಜೀವ ಬೆದರಿಕೆ ಹಾಕುವ ಮೂಲಕ ಆಗಾಗ ಸುದ್ದಿಯಾಗುತ್ತಿದ್ದ.

ADVERTISEMENT

ಕೆಲವು ವರ್ಷಗಳ ಹಿಂದೆ ಮಲ್ಪೆ ಸಮೀಪದ ನೆರಗಿ ಬಳಿ ರವಿ ಪೂಜಾರಿ ಒಡೆತನಕ್ಕೆ ಸೇರಿದ್ದ ಮನೆ ಇತ್ತು. ಪ್ರಸ್ತುತ ಆ ಮನೆಯನ್ನು ಬೇರೆಯವರು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.