ADVERTISEMENT

ಪೂರ್ಣಪ್ರಜ್ಞ, ವಿದ್ಯೋದಯ ಶಾಲೆಗೆ ಶೇ 100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 19 ಮೇ 2022, 16:05 IST
Last Updated 19 ಮೇ 2022, 16:05 IST
ನೀಶಾ ಶೆಟ್ಟಿ
ನೀಶಾ ಶೆಟ್ಟಿ   

ಉಡುಪಿ: ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರಿದ್ದು, ರಾಜ್ಯಕ್ಕೆ ದ್ವಿತೀಯ ಮತ್ತು ತೃತೀಯ ಸ್ಥಾನದೊಂದಿಗೆ ಶೇ 100 ಫಲಿತಾಂಶ ಪಡೆದು ಕೊಂಡಿದೆ.

ಅದಮಾರು ಪೂರ್ಣಪ್ರಜ್ಞ ಆಂಗ್ಲಮಾಧ್ಯಮ ಪ್ರೌಢಶಾಲೆಯ ನೀಶಾ ಶೆಟ್ಟಿ 624, ಎಲ್‌.ಸುಶಾಂತ್ 623 ಪಡೆದಿದ್ದು, ಪರೀಕ್ಷೆಗೆ ಕುಳಿತ ಎಲ್ಲ 51 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 23 ವಿಶಿಷ್ಟ ಶ್ರೇಣಿ, 25 ಪ್ರಥಮ ಶ್ರೇಣಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಅದಮಾರು ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆ ಶೇ 95 ಫಲಿತಾಂಶ ಪಡೆದಿದೆ. ದಕ್ಷಾ ಜೆ.ಶೆಟ್ಟಿ 615 ಅಂಕ ಪಡೆದಿದ್ದಾಳೆ. ಪರೀಕ್ಷೆಗೆ ಕುಳಿತ 56 ವಿದ್ಯಾರ್ಥಿಗಳಲ್ಲಿ 53 ಮಂದಿ ಉತ್ತೀರ್ಣರಾಗಿದ್ದು, 7 ವಿಶಿಷ್ಟ ಶ್ರೇಣಿ, 31 ಪ್ರಥಮ ಶ್ರೇಣಿ ಹಾಗೂ ಐವರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ADVERTISEMENT

ಫಲಿತಾಂಶಕ್ಕೆ ಸಂಸ್ಥೆಯ ಅಧ್ಯಕ್ಷರಾದ ಈಶಪ್ರಿಯತೀರ್ಥ ಸ್ವಾಮೀಜಿ ಹಾಗೂ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಶ್ರೀಧರ್ ರಾವ್‍ ಅಭಿನಂದಿಸಿದ್ದಾರೆ.

ವಿದ್ಯೋದಯ ಟ್ರಸ್ಟ್ ಅಂಗಸಂಸ್ಥೆ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ 100 ಫಲಿತಾಂಶ ಬಂದಿದೆ. 56 ವಿದ್ಯಾರ್ಥಿಗಳ ಪೈಕಿ 31 ಎ ಪ್ಲಸ್‌ ಶ್ರೇಣಿ, 20 ವಿದ್ಯಾರ್ಥಿಗಳು ‘ಎ’ ಶ್ರೇಣಿ. 5 ವಿದ್ಯಾರ್ಥಿಗಳು ಬಿ ಪ್ಲಸ್‌ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಪ್ರಮಥ್ ಭಾಗವತ್ 621 ಅಂಕಗಳಿಸಿ ಅತ್ಯಧಿಕ ಅಂಕ ಪಡೆದಿದ್ದಾರೆ. ಎಂದು ಮುಖ್ಯೋಪಾಧ್ಯಾಯಿನಿ ಸಂಧ್ಯಾ ಕಾರ್ನಾಡ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.