ADVERTISEMENT

ಉಡುಪಿ | ಅಮೃತ ಭಾರತಿ ಕಾಲೇಜು: ತರಗತಿ ಪ್ರಾರಂಭೋತ್ಸವ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 4:33 IST
Last Updated 26 ಜೂನ್ 2022, 4:33 IST
ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ  ಕಾಲೇಜಿನಲ್ಲಿ ಇತ್ತೀಚೆಗೆ ನಡೆದ  ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ  ಡಾ. ಕೆ ಪಿ ಪುತ್ತೂರಾಯ ಮಾತನಾಡಿದರು. 
ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ  ಕಾಲೇಜಿನಲ್ಲಿ ಇತ್ತೀಚೆಗೆ ನಡೆದ  ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ  ಡಾ. ಕೆ ಪಿ ಪುತ್ತೂರಾಯ ಮಾತನಾಡಿದರು.    

ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಡಾ. ಕೆ. ಪಿ. ಪುತ್ತೂರಾಯ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಉದ್ದೇಶಿಸಿ ವಿದ್ಯಾರ್ಥಿಗಳೇ ಕಾಲೇಜಿನ ನಿಜವಾದ ಸಂಪತ್ತು ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್‌ ಪಡೆದ ಸುಮೇಧಾ ಆಚಾರ್ಯ, ಐದನೇ ರ‍್ಯಾಂಕ್‌ ಪಡೆದ ಅನನ್ಯ, ಎಂಟನೇ ರ‍್ಯಾಂಕ್‌ ಪಡೆದ ಕವನ, ವಿಜ್ಞಾನ ವಿಭಾಗದಲ್ಲಿ ಐದನೇ ರ‍್ಯಾಂಕ್‌ ಪಡೆದ ಅಮೃತಾ ಪಿ. ಭಕ್ತ ಮತ್ತು ತನ್ಮಯ್ ಭಾರದ್ವಾಜ್ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಅಮೃತಭಾರತಿ ಟ್ರಸ್ಟ್‌ ಅಧ್ಯಕ್ಷ ಎಂ. ರವಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಸದಸ್ಯ ಬಾಲಕೃಷ್ಣ ಮಲ್ಯ, ಹಾಸ್ಟೆಲ್ ಸಮಿತಿಯ ಗೌರವಾಧ್ಯಕ್ಷ ಯೋಗೀಶ್ ಭಟ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್, ಟ್ರಸ್ಟ ಸದಸ್ಯ ರಾಮಕೃಷ್ಣ ಆಚಾರ್ಯ, ವಿಷ್ಣುಮೂರ್ತಿ ನಾಯಕ್ ಉಪಸ್ಥಿತರಿದ್ದರು.

ಕಾಲೇಜು ಪ್ರಾಂಶುಪಾಲ ಅಮರೇಶ್ ಹೆಗ್ಡೆ ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ನಿಶ್ಮಿತಾ ಪರಿಚಯಿಸಿ, ದೈಹಿಕ ನಿರ್ದೇಶಕ ವಿಜಯ್ ಕುಮಾರ್ ಶೆಟ್ಟಿ ನಿರೂಪಿಸಿದರು. ಉಪನ್ಯಾಸಕ ಸುಹಾಸ್ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.