ADVERTISEMENT

ಕೃಷ್ಣಮಠದಲ್ಲಿ ಭಾಗೀರಥಿ ಜನ್ಮದಿನ: ಗರ್ಭಗುಡಿ ಸೇರಿದ ಉತ್ಸವ ಮೂರ್ತಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 16:25 IST
Last Updated 20 ಜೂನ್ 2021, 16:25 IST
ಉಡುಪಿಯ ಕೃಷ್ಣಮಠದಲ್ಲಿ ಭಾನುವಾರ ಭಾಗೀರಥಿ ಜನ್ಮದಿನದ ಅಂಗವಾಗಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಚಿನ್ನದ ರಥದಲ್ಲಿಟ್ಟು ರಥಬೀದಿಯಲ್ಲಿ ಪ್ರದಕ್ಷಿಣೆ ಹಾಕಿಸಲಾಯಿತು. ಈ ಸಂದರ್ಭ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ದೇವರಿಗೆ ಮಂಗಳಾರತಿ ನೆರವೇರಿಸಿದರು.
ಉಡುಪಿಯ ಕೃಷ್ಣಮಠದಲ್ಲಿ ಭಾನುವಾರ ಭಾಗೀರಥಿ ಜನ್ಮದಿನದ ಅಂಗವಾಗಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಚಿನ್ನದ ರಥದಲ್ಲಿಟ್ಟು ರಥಬೀದಿಯಲ್ಲಿ ಪ್ರದಕ್ಷಿಣೆ ಹಾಕಿಸಲಾಯಿತು. ಈ ಸಂದರ್ಭ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ದೇವರಿಗೆ ಮಂಗಳಾರತಿ ನೆರವೇರಿಸಿದರು.   

ಉಡುಪಿ: ಕೃಷ್ಣಮಠದಲ್ಲಿ ಭಾನುವಾರ ಭಾಗೀರಥಿ ಜನ್ಮದಿನದ ಅಂಗವಾಗಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಚಿನ್ನದ ರಥದಲ್ಲಿಟ್ಟು ರಥಬೀದಿಯಲ್ಲಿ ಪ್ರದಕ್ಷಿಣೆ ಹಾಕಿಸಿ ಗರ್ಭಗುಡಿ ಸೇರಿಸಲಾಯಿತು.

ಇದಕ್ಕೂ ಮುನ್ನ ಮಧ್ವ ಸರೋವರದ ಬಳಿಯ ಬಾಗೀರಥಿ ಗುಡಿಯ ಎದುರು ಚಿನ್ನದ ತೊಟ್ಟಿಲು ಸೇವೆ ನೆರವೇರಿತು. ಅಷ್ಟಮಠಗಳ ಯತಿಗಳಿಗೆ ಮಾಲಿಕಾ ಮಂಗಳಾರತಿ ನಡೆಸಲಾಯಿತು.

ಸದ್ಯ ದೇವರು ಶಯನೋತ್ಸವದಲ್ಲಿರುವುದರಿಂದ ನಿರ್ಧಿಷ್ಟ ಅವಧಿಯವರೆಗೂ ರಥೋತ್ಸವಗಳು ನಡೆಯುವುದಿಲ್ಲ. ಉತ್ಥಾನ ದ್ವಾದಶಿಯಂದು ಶಯನಾವಸ್ಥೆಯಿಂದ ದೇವರನ್ನು ಹೊರತರಲಾಗುತ್ತದೆ. ಅಂದಿನಿಂದ ಉತ್ಸವಾದಿಗಳಿಗೆ ಚಾಲನೆ ಸಿಗಲಿದೆ.

ADVERTISEMENT

ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಇದ್ದರು. ನವಗ್ರಹ ದಾನವನ್ನು ಮಠದ ಪರಿಚಾರಕ ವರ್ಗಕ್ಕೆ ನೀಡಲಾಯಿತು. ಮಠದ ಪಾರುಪತ್ತೆದಾರರಾದ ಲಕ್ಷ್ಮೀಶ ಆಚಾರ್ಯ ಮುದರಂಗಡಿ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.