ADVERTISEMENT

Bengaluru Stampede | ಮಗನಿಗೆ ಸರ್ಕಾರಿ ನೌಕರಿ ನೀಡಿ: ಮೃತ ಚಿನ್ಮಯಿ ಪೋಷಕರು

ಚಿನ್ಮಯಿ ಶೆಟ್ಟಿ ಕುಟುಂಬಕ್ಕೆ ಪರಿಹಾರ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 13:22 IST
Last Updated 10 ಜೂನ್ 2025, 13:22 IST
ಚಿನ್ಮಯಿ ಶೆಟ್ಟಿ ತಾಯಿ ಪೂಜಾ ಶೆಟ್ಟಿ ಮತ್ತು ತಂದೆ ಕರುಣಾಕರ ಶೆಟ್ಟಿ ಅವರಿಗೆ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರು ₹25 ಲಕ್ಷ  ಪರಿಹಾರದ ಚೆಕ್ ಅನ್ನು ಮಂಗಳವಾರ ನೀಡಿದರು
ಚಿನ್ಮಯಿ ಶೆಟ್ಟಿ ತಾಯಿ ಪೂಜಾ ಶೆಟ್ಟಿ ಮತ್ತು ತಂದೆ ಕರುಣಾಕರ ಶೆಟ್ಟಿ ಅವರಿಗೆ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರು ₹25 ಲಕ್ಷ  ಪರಿಹಾರದ ಚೆಕ್ ಅನ್ನು ಮಂಗಳವಾರ ನೀಡಿದರು   

ಹೆಬ್ರಿ (ಉಡುಪಿ): ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದಿಂದ ಮೃತಪಟ್ಟ ಹೆಬ್ರಿಯ ಚಿನ್ಮಯಿ ಶೆಟ್ಟಿ ಕುಟುಂಬಕ್ಕೆ ಸರ್ಕಾರದ ₹25 ಲಕ್ಷ ನೆರವಿನ ಚೆಕ್‌ ಅನ್ನು ಜಿಲ್ಲಾಧಿಕಾರಿ  ಕೆ.ವಿದ್ಯಾಕುಮಾರಿ ಅವರು ಹಸ್ತಾಂತರಿಸಿದರು.

‘ನಾವು ಮಗಳನ್ನು ಕಳೆದುಕೊಂಡಿದ್ದೇವೆ. ಈ ನೋವು ನಮಗೆ ನಿರಂತರ. ಇದು ಮರೆಯಲು ಸಾಧ್ಯವಿಲ್ಲದ ದುರ್ಘಟನೆ’ ಎಂದು ಚಿನ್ಮಯಿ ಅವರ ತಂದೆ ಕರುಣಾಕರ ಶೆಟ್ಟಿ ಕಣ್ಣೀರಾದರು.

‘ಮಗಳ ಸಾವಿಗೆ ಪರಿಹಾರವಾಗಿ ಕೇವಲ ಹಣವಲ್ಲ, ನನ್ನ ಮಗನಿಗೆ ಸರ್ಕಾರಿ ನೌಕರಿ ನೀಡಬೇಕು’ ಎಂದು ಕರುಣಾಕರ ಶೆಟ್ಟಿ ಅವರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.

ADVERTISEMENT

‘ಸರ್ಕಾರದ ಆದೇಶದಂತೆ ₹25 ಲಕ್ಷ ಪರಿಹಾರವನ್ನು ನೀಡಲಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಸದಾ ಕುಟುಂಬದೊಂದಿಗೆ ಇರುತ್ತದೆ’ ಎಂದು ಜಿಲ್ಲಾಧಿಕಾರಿ  ತಿಳಿಸಿದರು.

ಬೆಂಗಳೂರಿನ ತಿಪ್ಪಸಂದ್ರದಲ್ಲಿ ನೆಲೆಸಿರುವ ಚಿನ್ಮಯಿ ಅವರ ಕುಟುಂಬ ಈಗ ಮಗಳ ಅಂತಿಮ ಕಾರ್ಯಗಳನ್ನು ನೆರವೇರಿಸಲು ಅಜ್ಜಿ ಮನೆ ಹೆಬ್ರಿ ತಾಲ್ಲೂಕಿನ ಮದಗದ ಮನೆಗೆ ಬಂದಿದೆ. ಹಾಗಾಗಿ ಹೆಬ್ರಿಗೆ ಬಂದು ಪರಿಹಾರದ ಚೆಕ್‌ ಹಸ್ತಾಂತರಿಸಲಾಗಿದೆ. ಎಸ್.ಪಿ ಹರಿರಾಮ್ ಶಂಕರ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಹೆಬ್ರಿ ತಹಶೀಲ್ಧಾರ್‌ ಎಸ್‌. ಎ. ಪ್ರಸಾದ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.