ಬ್ರಹ್ಮಾವರ: ಬಿಲ್ಲಾಡಿಯ ಸಾರ್ವಜನಿಕ ಶಾರದೋತ್ಸವ ಸಮಿತಿ ಹಾಗೂ ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ನೇತೃತ್ವದಲ್ಲಿ ಸೆ. 27 ಮತ್ತು 28ರಂದು ನಡೆಯುವ ‘ಬಿಲ್ಲಾಡಿ ದಸರಾ -25’ ಮಹೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಲಾಂಛನವನ್ನು ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, 9 ವರ್ಷಗಳಿಂದ ಬಿಲ್ಲಾಡಿಯಲ್ಲಿ ಯುವಕ–ಯುವತಿಯರು, ಊರಿನ ಹಿರಿಯರೊಂದಿಗೆ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವ ಬಿಲ್ಲಾಡಿ ದಸರಾ ಮಹೋತ್ಸವ ಊರ ಹಬ್ಬವಾಗಿ ವೈಭವಯುತವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಬಿಲ್ಲಾಡಿ ದಸರಾ ಸ್ಥಾಪಕ ಸಂಚಾಲಕ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ದಸರಾ–25ರ ಅಧ್ಯಕ್ಷ ಚಂದ್ರಕಾಂತ ಕೊಠಾರಿ, ಯುವ ಉದ್ಯಮಿ ಪ್ರಿಯದರ್ಶಿನ್ ಶೆಟ್ಟಿ, ರಾಘವ ಮೆಂಡನ್, ಬಿಲ್ಲಾಡಿ ಫ್ರೆಂಡ್ಸ್ ಅಧ್ಯಕ್ಷ, ಪ್ರತಾಪ ಶೆಟ್ಟಿ ಅರಾಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.