ADVERTISEMENT

ಬಿಲ್ಲವ ಪ್ರೀಮಿಯರ್ ಲೀಗ್‌ಗೆ ಚಾಲನೆ

ಹೆಜಮಾಡಿ ಯುವವಾಹಿನಿ ಪಡುಬಿದ್ರಿ ಘಟಕದ ಆಶ್ರಯದಲ್ಲಿ ಮಹಿಳಾ ಕ್ರಿಕೆಟ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:43 IST
Last Updated 1 ಫೆಬ್ರುವರಿ 2026, 7:43 IST
ಯುವವಾಹಿನಿ ಪಡುಬಿದ್ರಿ ಘಟಕದ ಆಶ್ರಯದಲ್ಲಿ ನಡೆಯುವ ಬಿಲ್ಲವ ಪ್ರೀಮಿಯರ್ ಲೀಗ್‌ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟು ರಕ್ಷಾ ಪೂಜಾರಿ ರೆಂಜಾಳ ಅವರನ್ನು ಸನ್ಮಾನಿಸಲಾಯಿತು
ಯುವವಾಹಿನಿ ಪಡುಬಿದ್ರಿ ಘಟಕದ ಆಶ್ರಯದಲ್ಲಿ ನಡೆಯುವ ಬಿಲ್ಲವ ಪ್ರೀಮಿಯರ್ ಲೀಗ್‌ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟು ರಕ್ಷಾ ಪೂಜಾರಿ ರೆಂಜಾಳ ಅವರನ್ನು ಸನ್ಮಾನಿಸಲಾಯಿತು   

ಪಡುಬಿದ್ರಿ: ಮಹಿಳಾ ಕ್ರೀಡಾಪಟುಗಳ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸಂಘಟನೆ, ಏಕತೆ, ಅಭ್ಯುದಯದ ಆಶಯದಲ್ಲಿ ಯುವವಾಹಿನಿ ಪಡುಬಿದ್ರಿ ಘಟಕದ ಆಶ್ರಯದಲ್ಲಿ ಹೆಜಮಾಡಿಯ ಬಸ್ತಿಪಡ್ಡು ರಾಜೀವಗಾಂಧಿ ಕ್ರೀಡಾಂಗಣದಲ್ಲಿ 2 ದಿನಗಳ ‘ಬಿಲ್ಲವ ಪ್ರೀಮಿಯರ್ ಲೀಗ್ 2026’ ಮಹಿಳಾ ಕ್ರಿಕೆಟ್ ಟೂರ್ನಿಗೆ ಶನಿವಾರ ಚಾಲನೆ ನೀಡಲಾಯಿತು.

ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಆಟಗಾರರು ಭಾಗವಹಿಸುತ್ತಿದ್ದು, ಗ್ರಾಮೀಣ ಮಾತ್ರವಲ್ಲದೆ ದೇಶ ವಿದೇಶಗಳ 8 ತಂಡಗಳು ಕಣದಲ್ಲಿವೆ. ಥಂಡರ್ ಸ್ಟ್ರೈಕರ್ಸ್ ಪಡುಬಿದ್ರಿ, ಹೆಜಮಾಡಿ ಬಿಲ್ಲವಾಸ್, ಯುವವಾಹಿನಿ ಕಾರ್ಕಳ, ಕ್ವೀನ್ಸ್ ಇಲವೆನ್ ಕುವೈಟ್ ‘ಎ’, ಕ್ವೀನ್ಸ್ ಇಲವೆನ್ ಕುವೈಟ್ ‘ಬಿ’, ರಾಯಲ್ ಸ್ಟಾರ್ಸ್ ಬೆಂಗಳೂರು, ಯುವವಾಹಿನಿ ಕೊಲ್ಯ, ದುಬೈ ವಾರಿಯರ್ಸ್ ತಂಡಗಳಿವೆ.

ಟೂರ್ನಿ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು. ಆಟಗಾರ್ತಿಯರು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂಲಕ ಪ್ರತಿಭೆ ಪ್ರದರ್ಶಿಸಿದರು. ಪ್ರೇಕ್ಷಕರು ಆಟಗಾರ್ತಿಯರ ಪ್ರದರ್ಶನಕ್ಕೆ ಹರ್ಷಧ್ವನಿಗಳ ಮೂಲಕ ಉತ್ತೇಜನ ನೀಡಿದರು.

ADVERTISEMENT

ಟೂರ್ನಿಗೆ ಅಂತರರಾಷ್ಟ್ರೀಯ ಕ್ರೀಡಾಪಟು ರಕ್ಷಾ ಪೂಜಾರಿ ರೆಂಜಾಳ ಚಾಲನೆ ನೀಡಿದರು. ಆತಿಥೇಯ ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ವಿಧಿತ್ ಪೂಜಾರಿ ಕರ್ನಿರೆ ಅಧ್ಯಕ್ಷತೆ ವಹಿಸಿದ್ದರು. ಭಾರತ್ ಕೊಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಟ್ರೋಫಿ ಅನಾವರಣಗೊಳಿಸಿ ಶುಭ ಹಾರೈಸಿದರು. ರಕ್ಷಾ ಪೂಜಾರಿ ರೆಂಜಾಳ ಅವರನ್ನು ಸನ್ಮಾನಿಸಲಾಯಿತು.

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಕಾಪು ನಿರೀಕ್ಷಕ ಅಜ್ಮತ್ ಅಲಿ, ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಪಾದೆಬೆಟ್ಟು ಸುಬ್ರಹ್ಮಣ್ಯ ಯುವಕ ವೃಂದದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಟೆನಿಸ್‌ಬಾಲ್ ಕ್ರಿಕೆಟ್ ಅಸೋಸಿಯೇಶನ್ ಗೌರವಾಧ್ಯಕ್ಷ ಶರತ್ ಶೆಟ್ಟಿ, ಮಂಗಳೂರು ವಿವಿ ಕ್ರಿಕೆಟ್ ತಂಡದ ಮಾಜಿ ನಾತಕ ವೈ. ಉದಯ ಕುಮಾರ್ ಕಟಪಾಡಿ, ತಾಲ್ಲೂಕು ಯುವಜನ ಸೇವಾ ಕ್ರೀಡಾಧಿಕಾರಿ ರಿತೇಶ್ ಕುಮಾರ್ ಶೆಟ್ಟಿ ಸೂಡ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ವೈ, ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಶ್ಮಾ ಎ. ಮೆಂಡನ್, ಮಾಜಿ ಉಪಾಧ್ಯಕ್ಷೆ ಪವಿತ್ರಾ ಗಿರೀಶ್, ಹೆಜಮಾಡಿ ಬಿರುವೆರ್ ಬ್ರದರ್ಸ್ ಅಧ್ಯಕ್ಷ ಮನೋಜ್ ಕೆ. ಸುವರ್ಣ, ಯುವವಾಹಿನಿ ಕಾರ್ಯದರ್ಶಿ ಭಾಸ್ಕರ ಎನ್. ಅಂಚನ್, ಕ್ರೀಡಾ ನಿರ್ದೇಶಕ ಶ್ರವಣ್ ಕುಮಾರ್, ಶೀನ ಪೂಜಾರಿ, ಲಕ್ಷ್ಮಣ ಡಿ. ಪೂಜಾರಿ, ಮಮತಾ ಅಂಚನ್ ಕಾರ್ಕಳ ಭಾಗವಹಿಸಿದ್ದರು. ಗೌರೀಶ್ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.