ADVERTISEMENT

ಕಾಪು: ಬಿಜೆಪಿ ಕಾರ್ಯಕಾರಿಣಿ ಸಭೆ 

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 13:57 IST
Last Updated 29 ಜುಲೈ 2024, 13:57 IST
ಕಾಪು ವೀರಭದ್ರ ದೇವಸ್ಥಾನದಲ್ಲಿ ಸೋಮವಾರ ಭಾರತೀಯ ಜನತಾ ಪಕ್ಷ ಆಯೋಜಸಿದ್ದ  ವಿಶೇಷ ಕರ‍್ಯಕಾರಿಣಿ ಕಾಪು ಶಾಸಕ ಗರ‍್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.
ಕಾಪು ವೀರಭದ್ರ ದೇವಸ್ಥಾನದಲ್ಲಿ ಸೋಮವಾರ ಭಾರತೀಯ ಜನತಾ ಪಕ್ಷ ಆಯೋಜಸಿದ್ದ  ವಿಶೇಷ ಕರ‍್ಯಕಾರಿಣಿ ಕಾಪು ಶಾಸಕ ಗರ‍್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.   

ಕಾಪು (ಪಡುಬಿದ್ರಿ): ಯುವ, ಮಹಿಳಾ ಮತದಾರರನ್ನು ಪಕ್ಷಕ್ಕೆ ಸೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಸಣ್ಣಪುಟ್ಟ ಬೇಸರ, ಗೊಂದಲದಿಂದ ದೂರವಿರುವ ಪಕ್ಷದ ಹಿರಿಯ ಕಾರ್ಯಕರ್ತರನ್ನು ಮಾತನಾಡಿಸಿ ಕರೆತರಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಇಲ್ಲಿನ ವೀರಭದ್ರ ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ಬಿಜೆಪಿ ಕಾಪು ಮಂಡಲ ಆಯೋಜಸಿದ್ದ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ವೈಫಲ್ಯ, ಕೇಂದ್ರ ಸರ್ಕಾರದ ಸಾಧನೆಗಳನ್ನು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮತದಾರರ ಮನೆಬಾಗಿಲಿಗೆ ತಲುಪಿಸಬೇಕು. ಕಾರ್ಯಕರ್ತರ ಶ್ರಮದಿಂದ ವಿಧಾನಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಲ್ಲಿ ಪಕ್ಷ 13 ಸಾವಿರ ಮತಗಳ ಅಂತರ ಪಡೆದು ಜಯ ಗಳಿಸಿದ್ದು, ಲೋಕಸಭಾ ಚುಣಾವಣೆಯಲ್ಲಿಯೂ ಕ್ಷೇತ್ರದಲ್ಲಿ 34 ಸಾವಿರ ಮತಗಳ ಅಂತರ ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ಸಂಘಟನೆ ದೃಷ್ಟಿಯಿಂದ ಪಕ್ಷದ ಪದಾಧಿಕಾರಿಗಳು ತಿಂಗಳಿಗೊಂದು ಬಾರಿ ಸೇರಿ ಅವಲೋಕನ ಮಾಡಬೇಕು ಎಂದರು.

ADVERTISEMENT

ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಕೆ ಮಾಡಬೇಕು. ಆ ಮೂಲಕ ಅಪಪ್ರಚಾರಗಳಿಗೆ ತಿರುಗೇಟು ನೀಡಿ ಪಕ್ಷ ಬಲಪಡಿಸಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ, ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಜಿ.ಪಂ. ಮಾಜಿ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಇದ್ದರು. ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ನಿರೂಪಿಸಿದರು.

ಮಾಜಿ ಸಚಿವರಿಗೆ ತಿರುಗೇಟು:

ಅನುದಾನವಿಲ್ಲವೆಂಬ ರೆಡಿಮೇಡ್ ಉತ್ತರವನ್ನು ಶಾಸಕರು ಕೊಡುತ್ತಿದ್ದಾರೆಂಬ ಮಾಜಿ ಸಚಿವ ವಿನಯಕುಮಾರ್ ಸೊರಕೆ ಟೀಕೆಗೆ ತಿರುಗೇಟು ನೀಡಿದ ಗರ‍್ಮೆ ಸತ್ಯ ಸಂಗತಿಯಿದು. ಅನುದಾನ ಇಲ್ಲ ಎಂಬ ರೆಡಿಮೇಡ್ ಉತ್ತರ ನನ್ನದಲ್ಲ ಸೊರಕೆಯವರೇ. ಇಲಾಖೆಯ ಅಧಿಕಾರಿಗಳೇ ಕಳೆದ ಕೆಡಿಪಿ ಸಭೆಯಲ್ಲಿ ಹೇಳಿದ್ದಾರೆ. ಅ ಮನುಷ್ಯ ಎದೆ ಮುಟ್ಟಿಕೊಂಡು ಹೇಳಬೇಕು. ಅನುದಾನವಿಲ್ಲದ ಬಗ್ಗೆ ಕಾಂಗ್ರೆಸ್ನ ಒಂದಷ್ಟು ಶಾಸಕರೇ ಅಸಮಾದಾನಿತರಾಗಿದ್ದಾರೆ. ರ‍್ಕಾರ ದಿವಾಳಿಯಾಗಿದೆ. ಜನರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ನಾವು ವೈಯಕ್ತಿಕ ಟೀಕೆಗೆ ಸುಮ್ಮನಿದ್ದೆವು. ಇನ್ಮುಂದೆ ಸೊರಕೆಯವರು ಒಂದು ಮಾತಾಡಿದಲ್ಲಿ ೧೦ ಮಾತಾಡುವಷ್ಟು ಬಂಡವಾಳ ನಮ್ಮಲ್ಲಿದೆ. ಹಿರಿಯ ರಾಜಕಾರಣಿಯಾಗಿರುವ ನೀವು ಆತ್ಮಾವಲೋಕನ ಮಾಡಿ ಆತ್ಮಸಾಕ್ಷಿಯಾಗಿ ಇನ್ನೊಬ್ಬರ ಬಗ್ಗೆ ಟೀಕೆ ಮಾಡಬೇಕು ಎಂದು ಮಾತಿನಲ್ಲಿ ತಿವಿದರು. ಚುನಾವಣೆ ಸಂರ‍್ಭದಲ್ಲಿಯೂ ವೈಯಿಕ್ತಿಕ ಟೀಕೆ ಮಾಡದಂತೆ ಕರ‍್ಯರ‍್ತರಿಗೆ ತಿಳಿಸಿದ್ದು ಅವರ ವೃಥಾ ಅರೋಪಗಳಿಗೆ ಇನ್ಮೇಲೆ ಸುಮ್ಮನಿರುವುದಿಲ್ಲ ಎಂದು ಕಟುವಾಗಿ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.