ಲೋಹಿತ್ ಖಾರ್ವಿ
ಕುಂದಾಪುರ (ಉಡುಪಿ): ಗಂಗೊಳ್ಳಿ ಅಳಿವೆ ಬಾಗಿಲಿನ ಹೊರ ಭಾಗದಲ್ಲಿ ಸಂಭವಿಸಿದ್ದ ನಾಡದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಪೈಕಿ ಲೋಹಿತ್ ಖಾರ್ವಿ (34) ಎಂಬುವವರ ಶವ ಬುಧವಾರ ಗಂಗೊಳ್ಳಿಯ ಲೈಟ್ ಹೌಸ್ ಪ್ರದೇಶದಲ್ಲಿ ಪತ್ತೆಯಾಗಿದೆ.
ಮೀನುಗಾರಿಕೆಗೆಂದು ಅರಬ್ಬಿ ಕಡಲಿಗೆ ಮಂಗಳವಾರ ತೆರಳಿದ್ದ ಗಂಗೊಳ್ಳಿಯ ನಾಲ್ವರು ಮೀನುಗಾರರಿದ್ದ ನಾಡದೋಣಿ ಕಡಲಿನ ಅಬ್ಬರಕ್ಕೆ ಮಗುಚಿ, ಮೂವರು ನಾಪತ್ತೆಯಾಗಿದ್ದರು. ಒಬ್ಬರನ್ನು ರಕ್ಷಿಸಲಾಗಿತ್ತು.
ನಾಪತ್ತೆಯಾಗಿರುವ ಸುರೇಶ್ ಖಾರ್ವಿ ಮತ್ತು ಜಗನ್ನಾಥ್ ಖಾರ್ವಿ ಅವರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.