ADVERTISEMENT

ಪಡು ಕಾಡೂರು ದೇವಸ್ಥಾನ ವಾರ್ಷಿಕೋತ್ಸವ 30ಕ್ಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:35 IST
Last Updated 28 ಏಪ್ರಿಲ್ 2025, 14:35 IST

ಬ್ರಹ್ಮಾವರ: ಪಡು ಕಾಡೂರು ದುರ್ಗಾ ಪರಮೇಶ್ವರಿ ಹಾಗೂ ಪರಿವಾರ ದೈವಗಳ ವಾರ್ಷಿಕೋತ್ಸವ ಇದೇ 30 ರಂದು ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ 11ಗಂಟೆಯಿಂದ ದುರ್ಗಾ ಮಿತ್ರ ವೃಂದದವರಿಂದ ಪ್ರತಿಭಾ ಪುರಸ್ಕಾರ, ಸಂಜೆ 6ರಿಂದ ಭಜನಾ ಕಾರ್ಯಕ್ರಮ, ರಾತ್ರಿ 8ರಿಂದ ಕಲ್ಲುಕುಟಿಗನ ಕೋಲ, ಬೇವು ಉಡುಗೆ, ಗೆಂಡೋತ್ಸವ ನಡೆಯಲಿದೆ. ಮೇ.1ರಂದು ಬೆಳಿಗ್ಗೆ ತುಲಾಭಾರ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.