ADVERTISEMENT

ಬ್ರಹ್ಮಾವರ: ಸ್ವಚ್ಛತಾ ಅಭಿಯಾನ- ಪಾರಂಪಳ್ಳಿ ಬೀಚ್ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 7:01 IST
Last Updated 21 ಅಕ್ಟೋಬರ್ 2025, 7:01 IST
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಡುಕೆರೆ ಬೀಚ್‌ ನಲ್ಲಿ ಪ್ಲಾಸ್ಟಿಕ್‌ಸ್ವಚ್ಛತಾ ಅಭಿಯಾನ ನಡೆಯಿತು.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಡುಕೆರೆ ಬೀಚ್‌ ನಲ್ಲಿ ಪ್ಲಾಸ್ಟಿಕ್‌ಸ್ವಚ್ಛತಾ ಅಭಿಯಾನ ನಡೆಯಿತು.   

ಬ್ರಹ್ಮಾವರ: ‘ಮನುಷ್ಯ ಪ್ರಕೃತಿ ಮೇಲೆ ದೊಡ್ಡ ಮಟ್ಟದ ಹಾನಿಯುಂಟು ಮಾಡುತ್ತಿದ್ದಾನೆ. ಇದಕ್ಕೆ ಈಗಿನ ಪ್ಲಾಸ್ಟಿಕ್ ದುಷ್ಪರಿಣಾಮವೇ ಸಾಕ್ಷಿ’ ಎಂದು ಮುಂಬೈ ಒಎನ್‌ಜಿಸಿ ನಿವೃತ್ತ ಅಧಿಕಾರಿ ಬನ್ನಾಡಿ ನಾರಾಯಣ ಆಚಾರ್ ಹೇಳಿದರು.

ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಡುಕೆರೆ ಬೀಚ್‌ನಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಮತ್ತು ಮಹಿಳಾ ಮಂಡಳಿ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ, ಮಣೂರು ಫ್ರೆಂಡ್ಸ್, ಕೋಟ ಜೆಸಿಐ ಸಿನಿಯರ್ ಲೀಜನ್‌, ಸಾಲಿಗ್ರಾಮ ಪಟ್ಟಣ ಪಂಚಾಯಿತಿ, ಗೀತಾನಂದ ಫೌಂಡೇಷನ್, ಪಾರಂಪಳ್ಳಿಯ ವಿನ್‌ಲೈಟ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದೊಂದಿಗೆ ನಡೆದ 276ನೇ ಸ್ವಚ್ಛತಾ ಅಭಿಯಾನದಲ್ಲಿ ಅವರು ಮಾತನಾಡಿದರು.

ಪಂಚವರ್ಣ ಸಂಘಟನೆ ಬಹಳ ವರ್ಷಗಳಿಂದ ಪರಿಸರ ಸಂರಕ್ಷಣೆಗೆ ಪಟ ತೊಟ್ಟು ಕಾರ್ಯ ನಿರ್ವಹಿಸುತ್ತಿದೆ. ಸಮಾಜ ಅರ್ಥೈಸಿಕೊಂಡು ಪರಿಸರಕ್ಕೆ ಪೂರಕ ವಾತಾವರಣ ಕಲ್ಪಿಸಬೇಕಿದೆ. ಪ್ಲಾಸ್ಟಿಕ್ ಮನುಕುಲವನ್ನು ಅಧಃಪತನದತ್ತ ಕೊಂಡೊಯ್ಯುತ್ತಿದೆ. ಈ ಬಗ್ಗೆ ಜಾಗೃತರಾಗಬೇಕು ಎಂದು ಹೇಳಿದರು.

ADVERTISEMENT

ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಮಹಿಳಾ ಮಂಡಳಿಸಂಚಾಲಕಿ ಸುಜಾತ ಬಾಯರಿ, ವಿನ್‌ಲೈಟ್ ಸ್ಪೋರ್ಟ್ ಕ್ಲಬ್‌ನ ದೇವೇಂದ್ರ ಶ್ರೀಯಾನ್, ಸುಧಾಕರ್ ಪೂಜಾರಿ ಭಾಗವಹಿಸಿದ್ದರು. ಪಂಚವರ್ಣದ ರವೀಂದ್ರ ಕೋಟ ಸಹಕರಿಸಿದರು. 25 ಚೀಲಕ್ಕೂ ಅಧಿಕ ಪ್ಲಾಸ್ಟಿಕ್ ತೆರವುಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.