ADVERTISEMENT

ಕೋಟ: ಕಾರಂತ ಥೀಂ ಪಾರ್ಕ್‌ನಲ್ಲಿ ಮಿಗ್‌ 21

ಕೋಟತಟ್ಟು ಗ್ರಾಮ ಪಂಚಾಯಿತಿ: ಕರಾವಳಿಯಲ್ಲಿ ಶಾಶ್ವತ ಯುದ್ಧ ವಿಮಾನ ಪ್ರದರ್ಶನ ತಾಣ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 7:25 IST
Last Updated 6 ಡಿಸೆಂಬರ್ 2025, 7:25 IST
ಕೋಟ ಥೀಂ ಪಾರ್ಕ್‌ನಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಸಜ್ಜಾಗುತ್ತಿರುವ ಮಿಗ್‌21 ಯುದ್ಧ ವಿಮಾನ
ಕೋಟ ಥೀಂ ಪಾರ್ಕ್‌ನಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಸಜ್ಜಾಗುತ್ತಿರುವ ಮಿಗ್‌21 ಯುದ್ಧ ವಿಮಾನ   

ಕೋಟ(ಬ್ರಹ್ಮಾವರ): ಕೋಟತಟ್ಟು ಗ್ರಾಮ ಪಂಚಾಯಿತಿಯ ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ವೀಕ್ಷಣೆಗೆ ಮತ್ತು ವಿದ್ಯಾರ್ಥಿಗಳಲ್ಲಿ ಭಾರತೀಯ ಸೇನೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಮಿಗ್‌ 21 ಯುದ್ಧ ವಿಮಾನದ ಮಾದರಿ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಯದಂತೆ ಕೇಂದ್ರದ ರಕ್ಷಣಾ ಇಲಾಖೆಯ ಸಹಕಾರೊಂದಿಗೆ ಯುದ್ಧ ವಿಮಾನದ ಮಾದರಿ ಪ್ರದರ್ಶನ ತಾಣ ಥೀಂ ಪಾರ್ಕ್‌ನಲ್ಲಿ ರೂಪುಗೊಳ್ಳುತ್ತಿದೆ.

ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಯುದ್ಧ ವಿಮಾನ ಪ್ರದರ್ಶನಕ್ಕೆ ಈಗ ವ್ಯವಸ್ಥೆ ಇದ್ದು ಇತರ ಕಡೆಗಳಲ್ಲಿ ಪ್ರದರ್ಶನ ತಾಣಗಳಿಲ್ಲ. ಕೋಟದಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲು ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಪ್ರಯತ್ನ ನಡೆಯುತ್ತಿತ್ತು. ಆದರೆ ರಕ್ಷಣಾ ಇಲಾಖೆಯ ಅನುಮೋದನೆ ಪಡೆಯಲು ಸಮಯ ಬೇಕಾಯಿತು. ಈಗ ಸಂಸದ ಕೋಟ ಶ್ರೀನಿವಾಸ ಪೂಜಾರಿ ರಕ್ಷಣಾ ಸಚಿವರ ಜೊತೆ ಮಾತುಕತೆ ನಡೆಸಿ ಅನುಮೋದನೆ ಪಡೆದುಕೊಂಡಿದ್ದಾರೆ.

ADVERTISEMENT

ಈ ಬಗ್ಗೆ ಮಾತನಾಡಿದ ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಬಾರಿಕೆರೆ, ‘ಕೋಟತಟ್ಟು ಗ್ರಾಮ ಪಂಚಾಯಿತಿ ಹಾಗೂ ಕಾರಂತ ಟ್ರಸ್ಟ್ ಯುದ್ಧ ವಿಮಾನದ ಮಾದರಿಯ ಪ್ರದರ್ಶನ ತಾಣದ ನಿರ್ವಹಣೆ ಮಾಡಲಿದೆ. ಭಾರತೀಯ ವಾಯುಪಡೆಯ ತಾಂತ್ರಿಕ ವಿಭಾಗದ 12 ಮಂದಿಯ ತಂಡ ವಿಮಾನ ಸಜ್ಜುಗೊಳಿಸುವಲ್ಲಿ ನಿರತವಾಗಿದ್ದು ಈ ತಿಂಗಳ ಅಂತ್ಯದೊಳಗೆ ಪ್ರದರ್ಶನಕ್ಕೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.

ವಿಶಿಷ್ಟ ಕೋಟ ಥೀಂ ಪಾರ್ಕ್‌

ಕಾರಂತ ಥೀಂ ಪಾರ್ಕ್‌ನಲ್ಲಿ ಮೂಕಜ್ಜಿಯ ಕನಸುಗಳ ಕಲಾಕೃತಿ, ತೆಂಕು, ಬಡಗು ತಿಟ್ಟಿನ ಯಕ್ಷಗಾನ ವೇಷಗಳ ಕಲಾಕೃತಿ, ಕೂಸಣ್ಣನ ಗಾಡಿಯ ಕಲಾಕೃತಿ, ಸಂಗೀತ ಕಾರಂಜಿ, ಕಾರಂತರ ಕಾದಂಬರಿಗಳು ಮತ್ತು ಕನ್ನಡದ ಪ್ರಸಿದ್ಧ ಕವಿ, ಲೇಖಕರ ಕಾದಂಬರಿಯನ್ನೊಳಗೊಂಡ ಪುಸ್ತಕಾಲಯ ಇದೆ. ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳು ಕಳೆದ 10 ವರ್ಷಗಳಿಂದ ಪ್ರತಿ ವಾರ ನಿರಂತರವಾಗಿ ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.