ADVERTISEMENT

ಮದುವೆ ದಿನ ಮತಹಾಕಿ ಮಾದರಿಯಾದ ವಧು, ವರರು

ಮಧುಮಕ್ಕಳ ವೇಷದಲ್ಲೇ ಮತಗಟ್ಟೆಗೆ ಬಂದು ಗಮನ ಸೆಳೆದ ಜೋಡಿಗಳು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 9:16 IST
Last Updated 19 ಏಪ್ರಿಲ್ 2019, 9:16 IST
ಉಡುಪಿಯ ಮಾರ್ಪಳ್ಳಿ ನಿವಾಸಿ ಶ್ವೇತಾ ಹಾಗೂ ಶಶಿಕುಮಾರ್ ದಂಪತಿ ಕೊರಂಗರ ಪಾಡಿ ಗ್ರಾಮದ ಕೆಮ್ತೂರು ಶಾಲೆಯ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.ಪ್ರಜಾವಾಣಿ ವಾರ್ತೆ
ಉಡುಪಿಯ ಮಾರ್ಪಳ್ಳಿ ನಿವಾಸಿ ಶ್ವೇತಾ ಹಾಗೂ ಶಶಿಕುಮಾರ್ ದಂಪತಿ ಕೊರಂಗರ ಪಾಡಿ ಗ್ರಾಮದ ಕೆಮ್ತೂರು ಶಾಲೆಯ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.ಪ್ರಜಾವಾಣಿ ವಾರ್ತೆ   

ಉಡುಪಿ: ಹಸೆಮಣೆ ಏರಲು ಸಿದ್ಧರಾಗಿದ್ದ ವಧು–ವರರು ಗುರುವಾರ ಮತಗಟ್ಟೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಹೊಸ ಜೀವನಕ್ಕೆ ಕಾಲಿಡುವ ಮುನ್ನ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಉಡುಪಿಯ ಮಾರ್ಪಳ್ಳಿ ನಿವಾಸಿ ಶ್ವೇತಾ ಹಾಗೂ ಶಶಿಕುಮಾರ್ ದಂಪತಿ ಕೊರಂಗರ ಪಾಡಿ ಗ್ರಾಮದ ಕೆಮ್ತೂರು ಶಾಲೆಯ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.

ಮಲ್ಪೆಯ ಕೊಳ ನಿವಾಸಿ ದೀಪಾ ಅವರು ಹಸೆಮಣೆ ಏರುವ ಮುನ್ನ ಮಲ್ಪೆಯ ಮತಗಟ್ಟೆಗೆ ತೆರಳಿ ಮತಹಾಕಿದರು. ಬಳಿಕ ಕಮಲಶಿಲೆಯ ಕಲ್ಯಾಣಮಂಟಪದಲ್ಲಿ ನಿಶ್ಚಯವಾಗಿದ್ದ ತಮ್ಮ ಮದುವೆಗೆ ಕುಟುಂಬ ಸಮೇತವಾಗಿ ತೆರಳಿದರು.

ADVERTISEMENT

ಕಾಪುವಿನ ಕರಂದಾಡಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ರಿತೇಶ್ ಸನೀಲ್‌ ಮತದಾನ ಮಾಡಿ, ಬಳಿಕ ಮದುವೆ ಮನೆಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.