ADVERTISEMENT

ಅಂತರ ಸಂಪರ್ಕ ಸೇತುವೆ ಮತ್ತೆ ಕುಸಿತ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 9:03 IST
Last Updated 7 ಆಗಸ್ಟ್ 2020, 9:03 IST
ಅಂತರ ಸಂಪರ್ಕ ಸೇತುವೆ ಶುಕ್ರವಾರ ನೆರೆ ನೀರಿನಿಂದಾಗಿ ಮತ್ತೆ ಕುಸಿದಿದೆ.
ಅಂತರ ಸಂಪರ್ಕ ಸೇತುವೆ ಶುಕ್ರವಾರ ನೆರೆ ನೀರಿನಿಂದಾಗಿ ಮತ್ತೆ ಕುಸಿದಿದೆ.   

ಉಜಿರೆ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂತರ ಸಂಪರ್ಕ ಸೇತುವೆ ಶುಕ್ರವಾರ ನೆರೆ ನೀರಿನಿಂದಾಗಿ ಮತ್ತೆ ಕುಸಿದಿದೆ.

ಗುರುವಾರ ಅಧಿಕಾರಿಗಳ ನೇತೃತ್ವದಲ್ಲಿ ಸೇತುವೆ ಮೇಲಿದ್ದ ಮರಗಳು ಹಾಗೂ ತ್ಯಾಜ್ಯ ತೆರವುಗೊಳಿಸಲಾಗಿತ್ತು.

ನೆರೆ ನೀರು ಪಕ್ಕದ ತೋಟಗಳಿಗೆ ನುಗ್ಗಿ ಅಪಾರ ಹಾನಿಯಾಗಿದೆ. ಎಂಎಲ್‌ಸಿ ಕೆ.ಪ್ರತಾಪಸಿಂಹ ನಾಯಕ್, ಚಾರ್ಮಾಡಿ ಪಿ.ಡಿ.ಒ ಪ್ರಕಾಶ ಶೆಟ್ಟಿ ನೊಚ್ಚ, ತಾಲ್ಲೂಕು ಪಂಚಾಯಿತಿ ಸದಸ್ಯ ಕೊರಗಪ್ಪ ನಾಯ್ಕ, ಶಶಿಧರ ಸ್ಥಳಕ್ಕೆ ಭೇಟಿ ನೀಡಿ ಮರಗಳನ್ನು ತೆರವುಗೊಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.