ADVERTISEMENT

‘ಸ್ವಚ್ಛ ಸರ್ವೇಕ್ಷಣೆ: ಉಡುಪಿ ನಂಬರ್‌ ಒನ್‌ ಆಗಲಿ’

ಬಲ್ಕ್ ವೇಸ್ಟ್ ಉತ್ಪಾದಕರಿಗೆ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 14:18 IST
Last Updated 21 ನವೆಂಬರ್ 2022, 14:18 IST
ನಗರಸಭೆ ಉಡುಪಿ ಹಾಗೂ ಸಿತಾರ ಸಂಸ್ಥೆ ದಾವಣಗೆರೆ ಸಹಯೋಗದಲ್ಲಿ ಸ್ವಚ್ಛ ಭಾರತ್ ಅಭಿಯಾನದ (ನಗರ) ಅಡಿಯಲ್ಲಿ ಬಲ್ಕ್ ವೇಸ್ಟ್ ಉತ್ಪಾದಕರಿಗೆ ಜಾಗೃತಿ ಕಾರ್ಯಕ್ರಮ ನಗರದ ಕಿದಿಯೂರು ಹೋಟೆಲ್‌ನಲ್ಲಿ ಶುಕ್ರವಾರ ನಡೆಯಿತು.
ನಗರಸಭೆ ಉಡುಪಿ ಹಾಗೂ ಸಿತಾರ ಸಂಸ್ಥೆ ದಾವಣಗೆರೆ ಸಹಯೋಗದಲ್ಲಿ ಸ್ವಚ್ಛ ಭಾರತ್ ಅಭಿಯಾನದ (ನಗರ) ಅಡಿಯಲ್ಲಿ ಬಲ್ಕ್ ವೇಸ್ಟ್ ಉತ್ಪಾದಕರಿಗೆ ಜಾಗೃತಿ ಕಾರ್ಯಕ್ರಮ ನಗರದ ಕಿದಿಯೂರು ಹೋಟೆಲ್‌ನಲ್ಲಿ ಶುಕ್ರವಾರ ನಡೆಯಿತು.   

ಉಡುಪಿ: ನಗರಸಭೆ ಉಡುಪಿ ಹಾಗೂ ಸಿತಾರ ಸಂಸ್ಥೆ ದಾವಣಗೆರೆ ಸಹಯೋಗದಲ್ಲಿ ಸ್ವಚ್ಛ ಭಾರತ್ ಅಭಿಯಾನದ (ನಗರ) ಅಡಿಯಲ್ಲಿ ಬಲ್ಕ್ ವೇಸ್ಟ್ ಉತ್ಪಾದಕರಿಗೆ ಜಾಗೃತಿ ಕಾರ್ಯಕ್ರಮ ನಗರದ ಕಿದಿಯೂರು ಹೋಟೆಲ್‌ನಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಿಬೀಡು ವಾರ್ಡ್‌ ಸದಸ್ಯ ಟಿ.ಜಿ ಹೆಗ್ಡೆ ಮಾತನಾಡಿ, ಉಡುಪಿ ನಗರಸಭೆಯು ಸ್ವಚ್ಛತೆ ವಿಭಾಗದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಸ್ವಚ್ಚ ಸರ್ವೇಕ್ಷಣಾ-2022 ರಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯಲು ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯವಾಗಿದೆ. ದೊಡ್ಡ ಹೋಟೆಲ್‌ಗಳಲ್ಲಿ ಹಸಿಕಸ ನಿರ್ವಹಣೆ ಕ್ಲಿಷ್ಟಕರವಾಗಿದ್ದು, ಈ ಕುರಿತು ಜಾಗೃತಿ ಕಾರ್ಯಕ್ರಮದಿಂದ ಹಸಿ ಕಸ ನಿರ್ವಹಣೆ ಸಾಧ್ಯ ಎಂದರು.

ನಗರಸಭೆಯ ಪರಿಸರ ಎಂಜಿನಿಯರ್ ಸ್ನೇಹಾ ಮಾತನಾಡಿ, ನಗರ ವಾಸಿಗಳು ಸ್ವಚ್ಛತೆಗೆ ಸಹಕಾರ ನೀಡುತ್ತಿದ್ದು, 2021ರ ಸ್ವಚ್ಚ ಸರ್ವೇಕ್ಷಣೆಯಲ್ಲಿ ಬಯಲು ಬಹಿರ್ದೆಸೆ ಮುಕ್ತ ನಗರ ಎಂಬ ಹೆಗ್ಗಳಿಕೆಗೆ ಉಡುಪಿ ಪಾತ್ರವಾಗಿದೆ.

ADVERTISEMENT

ಈ ವರ್ಷ ಸ್ವಚ್ಛತೆಗೆ ಮತ್ತಷ್ಟು ಆದ್ಯತೆ ನೀಡಿದರೆ ಸ್ವಚ್ಛ ಸರ್ವೇಕ್ಷಣ್-2022 ರಲ್ಲಿ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಉಡುಪಿ ಮೊದಲ ಸ್ಥಾನ ಪಡೆಯಬಹುದು.ಸ್ವಚ್ಛತೆ ಕಾಪಾಡುವುದರ ಜೊತೆಗೆ ಎಲ್ಲರೂ ಸ್ವಚ್ಛತಾ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಉತ್ತಮ ಶ್ರೇಯಾಂಕ ನೀಡಬೇಕು ಎಂದು ಮನವಿ ಮಾಡಿದರು.

ನಗರಸಭೆಯ ಸ್ವಚ್ಛತಾ ರಾಯಭಾರಿ ಜೋಸೆಫ್ ಜಿ.ಎಂ.ರೆಬೆಲ್ಲೋ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗಸಭೆಯ ಹಿರಿಯ ಆರೋಗ್ಯ ಸಹಾಯಕಿ ಶಶಿರೇಖಾ, ಕಿದಿಯೂರು ಹೋಟೆಲ್‌ ಭಾಗವಹಿಸಿದ್ದರು. ಸಿತಾರ ಸಂಸ್ಥೆಯ ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.