ಬೈಂದೂರು: ಇಲ್ಲಿನ ಹಿರಿಯ ನಾಗರಿಕರ ವೇದಿಕೆ ಹಾಗೂ ಸೀನಿಯರ್ ಛೇಂಬರ್ ವತಿಯಿಂದ ವಿಶ್ವ ಯೋಗ ದಿನ ಆಚರಿಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕ, ರಾಜ್ಯ ಮಟ್ಟದ ಯೋಗ ಸಂಪನ್ಮೂಲ ವ್ಯಕ್ತಿ ನಾರಾಯಣ ದೇವಾಡಿಗ ಅವರ ನೇತೃತ್ವದಲ್ಲಿ ವೇದಿಕೆ ಸದಸ್ಯರು ಯೋಗ ಮಾಡಿದರು.
ಗಿರೀಶ್ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು.
ಯೋಗಗುರು ನಾರಾಯಣ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಸದಸ್ಯ ವೆಂಕಟರಮಣ ಯೋಗ ಗೀತೆ ಹಾಡಿದರು. ನಿಕಟ ಪೂರ್ವ ಅಧ್ಯಕ್ಷ ಪುಂಡಲೀಕ ನಾಯಕ್ ಯೋಗದ ಮಹತ್ವ ವಿವರಿಸಿದರು.
ಸೀನಿಯರ್ ಛೇಂಬರ್‌ನ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಉಪಾಧ್ಯಕ್ಷ ಜಿ.ಈಶ್ವರ, ನಿಕಟಪೂರ್ವ ಕಾರ್ಯದರ್ಶಿ ಜಯಾನಂದ ಪಟಗಾರ ಭಾಗವಹಿಸಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಉಮೇಶ ರಾಯ್ಕರ್ ಪ್ರಾರ್ಥಿಸಿದರು. ಕಾರ್ಯದರ್ಶಿ ಗೋವಿಂದ ಬಿಲ್ಲವ ವರದಿ ವಾಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.