
ಪ್ರಜಾವಾಣಿ ವಾರ್ತೆ
ಕೋಳಿ ಅಂಕ (ಪ್ರಾತಿನಿಧಿಕ ಚಿತ್ರ)
ಕಾರ್ಕಳ: ಮನೆಯ ಸಮೀಪದ ಅಡಿಕೆ ತೋಟದ ಮಧ್ಯೆ ಶಾಮಿಯಾನ ಹಾಕಿ ಕುರ್ಚಿ, ಟೇಬಲ್ ಇರಿಸಿ ಸಾರ್ವಜನಿಕರನ್ನೂ ಸೇರಿಸಿ ಕೋಳಿಗಳ ಕಾಲುಗಳಿಗೆ ಬಾಳುಕತ್ತಿ ಕಟ್ಟಿ, ಹಣ ಪಣವಾಗಿ ಇಟ್ಟು ನಲ್ಲೂರು ಗ್ರಾಮದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿದ್ದಾರೆ.
ಗ್ರಾಮದ ಬಂಗರೋಡಿ ಎಂಬಲ್ಲಿ ಉದಯ ಶೆಟ್ಟಿ ಕೋಳಿ ಅಂಕ ನಡೆಸುತ್ತಿದ್ದರು.
ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್ಐ ಸುಂದರ, ತಂಡ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಶಿರ್ವದ ರವಿ, ಸತೀಶ್, ಸ್ಟೀಫನ್, ಕೊಂಡಮಲ ಗ್ರಾಮದ ಅಡಿಗಪ್ಪ, ಅಪ್ಪು ಸಂಪ್ಯ ನಗರ ಉದ್ಯಾವರ, ಸಂದೀಪ್ ಉದ್ಯಾವರ ಅವರನ್ನು ಬಂಧಿಸಿ 4 ಕೋಳಿ, ₹2.5 ಲಕ್ಷ ಮೌಲ್ಯದ ಕಾರು, ₹3 ಸಾವಿರ ನಗದು, ಇತರ ಸಲಕರಣೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.