ADVERTISEMENT

ಉಡುಪಿ: ಇಬ್ಬರು ಸೋಂಕಿತರು ಸಾವು; 211 ಮಂದಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 17:02 IST
Last Updated 16 ಅಕ್ಟೋಬರ್ 2020, 17:02 IST

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರು ಕೋವಿಡ್ ಸೋಂಕಿತರು ಮೃತಪಟ್ಟಿದ್ದು, 211 ಮಂದಿಗೆ ಸೋಂಕು ದೃಢಪಟ್ಟಿದೆ. ಉಡುಪಿ ತಾಲ್ಲೂಕಿನ 66 ವರ್ಷದ ವ್ಯಕ್ತಿ ಹಾಗೂ ಕಾರ್ಕಳ ತಾಲ್ಲೂಕಿನ 75 ವರ್ಷದ ವೃದ್ಧ ಮೃತರಾದವರು.

ಸೋಂಕಿತರಲ್ಲಿ ಉಡುಪಿಯ 85, ಕುಂದಾಪುರದ 59, ಕಾರ್ಕಳದ 64 ಹಾಗೂ ಇತರೆ ಜಿಲ್ಲೆಗಳ ಮೂವರು ಇದ್ದಾರೆ. 44 ಸೋಂಕಿತರಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ 167 ಮಂದಿಗೆ ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 41 ಸೋಂಕಿತರಿಗೆ ರೋಗದ ಲಕ್ಷಣಗಳಿದ್ದರೆ, 170 ಜನರಿಗೆ ಲಕ್ಷಣಗಳು ಕಾಣಿಸಿಕೊಂಡಿಲ್ಲ.

255 ರೋಗಿಗಳು ಗುಣಮುಖರಾಗಿದ್ದು, ಇದುವರೆಗೂ 18,409 ಮಂದಿ ಸೋಂಕು ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ 20477 ಒಟ್ಟು ಸೋಂಕು ಪ್ರಕರಣಗಳಿದ್ದು, 1,907 ಸಕ್ರಿಯ ಸೋಂಕಿತ ಪ್ರಕರಣಗಳು ಇವೆ. 172 ಸೋಂಕಿತರು ಸಾವನ್ನಪ್ಪಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.