ADVERTISEMENT

ಉಡುಪಿ: 62 ಮಂದಿಗೆ ಕೋವಿಡ್‌, ಒಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 15:55 IST
Last Updated 29 ಅಕ್ಟೋಬರ್ 2020, 15:55 IST

ಉಡುಪಿ: ಜಿಲ್ಲೆಯಲ್ಲಿ ಗುರುವಾರ 62 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, ಉಡುಪಿಯ 77 ವರ್ಷದ ವೃದ್ಧ ಸೋಂಕಿನಿಂದ ಮೃತಪಟ್ಟಿದ್ದಾರೆ.

ಸೋಂಕಿತರಲ್ಲಿ ಉಡುಪಿಯ 35, ಕುಂದಾಪುರದ 16, ಕಾರ್ಕಳದ 10 ಹಾಗೂ ಬೇರೆ ಜಿಲ್ಲೆಗಳ ಒಬ್ಬರು ಇದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಒಬ್ಬರು, ಹೋಂ ಐಸೊಲೇಷನ್‌ನಲ್ಲಿ 61 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ 111 ಸೇರಿ ಇದುವರೆಗೂ 20,741 ಮಂದಿ ಗುಣಮುಖರಾಗಿದ್ದು, 871 ಸಕ್ರಿಯ ಸೋಂಕಿತರು ಇದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 21,793 ಇದ್ದು, 182 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.