ADVERTISEMENT

ಅಂತರರಾಜ್ಯ ಕಳ್ಳರ ಬಂಧನ; ಮೊಬೈಲ್‌, ನಗದು ವಶ

ಪ್ಲೋಝೋನ್‌ ಮೊಬೈಲ್‌ ಅಂಗಡಿ ಕಳವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 9:30 IST
Last Updated 3 ಡಿಸೆಂಬರ್ 2019, 9:30 IST
ನಗರದ ತ್ರಿವೇಣಿ ಜಂಕ್ಷನ್‌ ಬಳಿಯ ಪ್ಲೇಝೋನ್‌ ಮೊಬೈಲ್ ಅಂಗಡಿಯಲ್ಲಿ ಮೊಬೈಲ್‌ಗಳನ್ನು ಕಳವು ಮಾಡಿದ್ದ ಅಂತರರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ತ್ರಿವೇಣಿ ಜಂಕ್ಷನ್‌ ಬಳಿಯ ಪ್ಲೇಝೋನ್‌ ಮೊಬೈಲ್ ಅಂಗಡಿಯಲ್ಲಿ ಮೊಬೈಲ್‌ಗಳನ್ನು ಕಳವು ಮಾಡಿದ್ದ ಅಂತರರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.   

ಉಡುಪಿ:ನ.5ರಂದು ನಗರದ ತ್ರಿವೇಣಿ ಜಂಕ್ಷನ್‌ ಬಳಿಯ ಪ್ಲೇಝೋನ್‌ ಮೊಬೈಲ್ ಅಂಗಡಿಯಲ್ಲಿ ₹ 8.34 ಲಕ್ಷ ಮೌಲ್ಯದ ಮೊಬೈಲ್‌ ಹಾಗೂ ನಗದು ಕಳವು ಮಾಡಿದ್ದ ಅಂತರರಾಜ್ಯ ಕಳ್ಳರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿಯ ರಜಾಕ್‌ ಅಸ್ಲಾಂ ಮುಜಾವರ್‌, ಕುಷ್ಟಗಿ ತಾಲ್ಲೂಕಿನ ರಾಜಾಸಾಬ್ ನಾಯಕ್‌ ಹಾಗೂ ಬಿಹಾರದ ದೀಪಕ್‌ ಪ್ರಸಾದ್‌ ಬಂಧಿತರು.

ಬಂಧಿತರಿಂದ ₹ 3 ಲಕ್ಷ ಮೌಲ್ಯದ 16 ಮೊಬೈಲ್‌, ₹ 22,000, ಕಳವಿಗೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ನಗರ ಸಿಪಿಐ ಮಂಜುನಾಥ, ಮಲ್ಪೆ ಠಾಣೆಯ ಪಿಎಸ್‌ಐ ತಿಮ್ಮೇಶ್‌, ಎಎಸ್‌ಐ ರವಿಚಂದ್ರ ಹಾಗೂ ಸಿಬ್ಬಂದಿ ರಾಮು ಹೆಗ್ಡೆ ಡಿಸಿಐಬಿ, ರಾಘವೇಂದ್ರ ಡಿಸಿಐಬಿ, ನಗರ ಠಾಣೆಯ ಲೋಕೇಶ್‌, ಬಾಲಕೃಷ್ಣ, ಇಮ್ರಾನ್‌, ಸಂತೋಷ್‌ ರಾಥೋಡ್‌ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.