ADVERTISEMENT

ಬೈಂದೂರು: ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 4:58 IST
Last Updated 31 ಜುಲೈ 2024, 4:58 IST
ಮೊಸಳೆ ಹಿಡಿಯಲು ಬೋನು ಇಟ್ಟಿರುವುದು
ಮೊಸಳೆ ಹಿಡಿಯಲು ಬೋನು ಇಟ್ಟಿರುವುದು   

ಬೈಂದೂರು : ತಾಲ್ಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೂರಿನ ಬಾವಿಯೊಂದರಲ್ಲಿ ಮಂಗಳವಾರ ಮೊಸಳೆ ಪ್ರತ್ಯಕ್ಷವಾಗಿದೆ.

ನಾಗೂರು ಗ್ರಾಮದ ಒಡೆಯರ ಮಠ ವಿಶ್ವನಾಥ ಉಡುಪ ಎಂಬುವವರ ಮನೆಯ ಬಾವಿಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅದನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದೆ.

ಸ್ಥಳೀಯರ ಸಹಾಯದಿಂದ ಅರಣ್ಯ ಇಲಾಖೆಯವರು ಮೊಸಳೆಗೆ ಬೋನು ಇಟ್ಟು, ಬಾವಿಯ ಸುತ್ತಲೂ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿ, ಅದರ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ.

ADVERTISEMENT

ಬಾವಿಯ ದಂಡೆಯನ್ನು ಒಡೆದು ಬೋನು ಇರಿಸಿ, ಅದರಲ್ಲಿ ಕೋಳಿಯ ಮಾಂಸವನ್ನು ಹಾಕಲಾಗಿದೆ.

ಮೊಸಳೆ ಬಾವಿಯಲ್ಲಿ ಇರುವ ಮಾಹಿತಿ ಅರಿತು ನೂರಾರು ಮಂದಿ ಅದನ್ನು ನೋಡಲು ಬರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.