
ಬ್ರಹ್ಮಾವರ: ಸವಿತಾ ಸಮಾಜದ ವಿರುದ್ಧ ಬಿಜೆಪಿ ಮುಖಂಡ ಸಿ.ಟಿ. ರವಿ ಅಕ್ಷೇಪಕಾರಿ ಪದಬಳಕೆ ಮಾಡಿ ಅವಮಾನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಖಂಡಿಸಿದೆ.
ಸಾಲಿಗ್ರಾಮದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕೋಟ ತಿಮ್ಮ ಪೂಜಾರಿ, ಸವಿತಾ ಸಮಾಜ ಅತ್ಯಂತ ಶ್ರಮಿಕ ವರ್ಗವಾಗಿದ್ದು, ಅವರ ವೃತ್ತಿಗೆ ಪಾರಂಪರಿಕ ಮನ್ನಣೆ ಇದೆ. ಅವರನ್ನು ಅವಮಾನಿಸಿ ಮಾತನಾಡುವುದು ರವಿ ಅವರಿಗೆ ಶೋಭೆ ತರುವುದಿಲ್ಲ. ಶೀಘ್ರ ಅವರು ತಮ್ಮ ಹೇಳಿಕೆ ಹಿಂಪಡೆದು ಬಹಿರಂಗ ಕ್ಷಮೆ ಯಾಚಿಸಬೇಕು. ಸರ್ಕಾರ ಅವರ ಹೇಳಿಕೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್, ಪಕ್ಷದ ಪ್ರಮುಖರಾದ ಗೋಪಾಲ ಬಂಗೇರ, ಅಚ್ಚುತ ಪೂಜಾರಿ, ಚಂದ್ರ ಪೂಜಾರಿ, ಮಹಾಬಲ ಮಡಿವಾಳ, ಬಿ. ಶೇಖರ ಪಾರಂಪಳ್ಳಿ, ದಿನೇಶ ಬಂಗೇರ, ವಿಜಯ ಪೂಜಾರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.