ADVERTISEMENT

ಮಕ್ಕಳೊಂದಿಗೆ ಬಿಸಿಯೂಟ ಮಾಡಿದ ಡಿಡಿಪಿಐ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 16:10 IST
Last Updated 23 ಅಕ್ಟೋಬರ್ 2021, 16:10 IST
ಉಡುಪಿ ತಾಲ್ಲೂಕಿನ ತೆಂಕನಿಡಿಯೂರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಶನಿವಾರ ಭೇಟಿನೀಡಿದ ಡಿಡಿಪಿಐ ಎಚ್‌.ನಾಗೂರ ಮಕ್ಕಳ‌ ಕಲಿಕಾ ಪ್ರಗತಿ ಪರಿಶೀಲಿಸಿ, ಮಧ್ಯಾಹ್ನದ ಬಿಸಿಯೂಟದ ರುಚಿ ನೋಡಿದರು.
ಉಡುಪಿ ತಾಲ್ಲೂಕಿನ ತೆಂಕನಿಡಿಯೂರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಶನಿವಾರ ಭೇಟಿನೀಡಿದ ಡಿಡಿಪಿಐ ಎಚ್‌.ನಾಗೂರ ಮಕ್ಕಳ‌ ಕಲಿಕಾ ಪ್ರಗತಿ ಪರಿಶೀಲಿಸಿ, ಮಧ್ಯಾಹ್ನದ ಬಿಸಿಯೂಟದ ರುಚಿ ನೋಡಿದರು.   

ಉಡುಪಿ: ತಾಲ್ಲೂಕಿನ ತೆಂಕನಿಡಿಯೂರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಶನಿವಾರ ಭೇಟಿನೀಡಿದ ಡಿಡಿಪಿಐ ಎನ್‌.ಎಚ್‌.ನಾಗೂರ ಮಕ್ಕಳ‌ ಕಲಿಕಾ ಪ್ರಗತಿ ಪರಿಶೀಲಿಸಿ, ಮಧ್ಯಾಹ್ನದ ಬಿಸಿಯೂಟದ ರುಚಿ ನೋಡಿದರು.

ಶಾಲಾ ಭೇಟಿವೇಳೆ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದಿ ಡಿಡಿಪಿಐ ಶಾಲೆಗಳು ಆರಂಭವಾಗಿದ್ದು ಉತ್ತಮ ಅಧ್ಯಯನ ಮಾಡುವಂತೆ ತಿಳಿ ಹೇಳಿದರು. ಬಳಿಕ ಪೋಷಕರೊಂದಿಗೂ ಸಮಾಲೋಚನೆ ನಡೆಸಿ ಮಕ್ಕಳನ್ನು ಸೋಮವಾರದಿಂದ ಶಾಲೆಗೆ ಕಳಿಸಲು ಮನವಿ ಮಾಡಿದರು.

ತರಗತಿಯೊಳಗೆ ಕುಳಿತು ಶಿಕ್ಷಕರ ಬೋಧನಾ ವಿಧಾನವನ್ನು ಪರಿಶೀಲಿಸಿ ಶೈಕ್ಷಣಿಕ ದಾಖಲೆಗಳನ್ನು ಸರಿಯಾಇ ನಿರ್ವಹಿಸುವಂತೆ ಸೂಚನೆ ನೀಡಿದರು. ಶಾಲಾ ಮಕ್ಕಳಿಗೆ ಹೆಚ್ಚು‌ ಕಲಿಕಾ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಕಲಿಕಾ ದೃಢೀಕರಣಕ್ಕೆ ಸೂಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.