ADVERTISEMENT

ನಾಟಿ ನಿರತ ಕೃಷಿಕ ಸಾವು

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 13:34 IST
Last Updated 12 ಜುಲೈ 2020, 13:34 IST

ಬೈಂದೂರು: ಹಕ್ಲಾಡಿ ಗ್ರಾಮದ ಯಳೂರು ಗೋಳಿಕಟ್ಟೆಯ ಕೃಷಿಕ ಸುಧಾಕರ ಶೆಟ್ಟಿ(52) ಶನಿವಾರ ತಮ್ಮ ಗದ್ದೆಯಲ್ಲಿ ಭತ್ತದ ನೇಜಿ ನಾಟಿ ಕೆಲಸ ಮಾಡುತ್ತಿದ್ದಾಗ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಕೃಷಿಜಾಗದಲ್ಲಿ ಕುಸಿದು ಬಿದ್ದವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಒಯ್ದಾಗ ಅವರು ಅದಾಗಲೇ ಮೃತರಾಗಿದ್ದರೆಂದು ವೈದ್ಯರು ದೃಢಪಡಿಸಿದ್ದರು. ಮೃತರ ಪುತ್ರ ಪ್ರತಾಪ ಶೆಟ್ಟಿ ನೀಡಿರುವ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT