ADVERTISEMENT

ಬೈಂದೂರು: ಮಹಾರಾಜ ಸ್ವಾಮಿ ವರಾಹ ದೇವರಿಗೆ ಬೆಳ್ಳಿರಥ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 6:24 IST
Last Updated 10 ಸೆಪ್ಟೆಂಬರ್ 2024, 6:24 IST
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿ ಕಾರ್ಯಕ್ರಮ ಉದ್ಘಾಟಿಸಿದರು.
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಹೊರನಾಡು ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿ ಕಾರ್ಯಕ್ರಮ ಉದ್ಘಾಟಿಸಿದರು.   

ಬೈಂದೂರು: ತಾಲ್ಲೂಕಿನ ಮರವಂತೆ ಮಹಾರಾಜ ಸ್ವಾಮಿ ವರಾಹ ದೇವರಿಗೆ ಬೆಳ್ಳಿರಥವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಭಾನುವಾರ ಸಮರ್ಪಣೆ ಮಾಡಲಾಯಿತು.

ಬೆಳ್ಳಿರಥ ಪುರ ಮೆರವಣಿಗೆ ಶ್ರೀರಾಮ ದೇವಸ್ಥಾನದಿಂದ ಮಹಾರಾಜ ಸ್ವಾಮಿ ವರಾಹ ದೇವಸ್ಥಾನದವರೆಗೆ ವಿಜೃಂಭಣೆಯಿಂದ ನಡೆಯಿತು. ಬೆಳ್ಳಿರಥ ಸಮರ್ಪಣೆ ಕಾರ್ಯಕ್ರಮ ಅಂಗವಾಗಿ ದೇವರಿಗೆ ಹೂವಿನ ಅಲಂಕಾರ ಪೂಜೆ, ಹಣ್ಣುಕಾಯಿ, ಮಂಗಳಾರತಿ ಸೇವೆ, ಅನ್ನದಾನ ಸೇವೆ ಸಲ್ಲಿಸಲಾಯಿತು.

ಅನ್ನಪೂರ್ಣೇಶ್ವರಿ ದೇವಸ್ಥಾನ ಹೊರನಾಡು ಧರ್ಮಕರ್ತ ಜಿ. ಭೀಮೇಶ್ವರ ಜೋಷಿ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮರವಂತೆ ವರಾಹ ಸ್ವಾಮಿ ಕ್ಷೇತ್ರಕ್ಕೂ ಜಗನ್ಮಾತೆ ಸನ್ನಿಧಾನಕ್ಕೂ ಅವಿನಾಭವ ಸಂಬಂಧ ಇದೆ. ವಿಷ್ಣುವಿನ ದಶಾವಾತರಗಳಲ್ಲಿ ಪ್ರಮುಖ ಮೂರು ಅವತಾರಗಳು ಇಲ್ಲಿ ನೆಲೆಗೊಂಡಿರುವುದು ಇಲ್ಲಿನ ಜನರ ಭಾಗ್ಯ. ಒಂದೆ ಕಡೆ ದೇವರ ಮೂರು ಅವಾತರಗಳನ್ನು ನೋಡಿ ಕಣ್ತುಂಬಿಕೊಳ್ಳಲು ಅವಕಾಶ ಇರುವುದು ಮರವಂತೆ ಕ್ಷೇತ್ರದಲ್ಲಿ ಮಾತ್ರ ಎಂದರು.

ADVERTISEMENT

ಭಾರತೀಯ ಸಂಸ್ಕೃತಿ ಪ್ರತಿಷ್ಠಾನ ಉಡುಪಿ ಅಧ್ಯಕ್ಷ ರಾಜಶೇಖರ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರುರಾಜ ಗಂಟಿಹೊಳೆ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ.ನಾಯಕ್, ಮರವಂತೆ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಖಾರ್ವಿ, ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉದ್ಯಮಿ ನಿತಿನ್ ನಾರಾಯಣ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ ಖಾರ್ವಿ ಅಳಿವೆಕೋಡಿ, ಕರಾವಳಿ ಸಾಂಪ್ರಾದಾಯಿಕ ನಾಡದೋಣಿ ಮೀನುಗಾರರ ಸಂಘ ಗಂಗೊಳ್ಳಿ ವಲಯ ಅಧ್ಯಕ್ಷ ಯಶವಂತ ಗಂಗೊಳ್ಳಿ, ನಾಗಲಕ್ಷ್ಮಿ, ಸತೀಶ್ ಕೊಠಾರಿ ನಾಯ್ಕನಕಟ್ಟೆ, ಬೆಳ್ಳಿರಥ ಶಿಲ್ಪಿ ಜಕ್ಕಣಾಚಾರ್ಯ ಕಾಳಿಕಾಂಬ ಶಿಲ್ಪಕಲೆ ಬೆಳಗೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಇದ್ದರು.

ಸತೀಶ್ ಎಂ. ನಾಯಕ್ ಸ್ವಾಗತಿಸಿದರು. ಅನಿತಾ ಆರ್.ಕೆ. ವಂದಿಸಿದರು. ಸುಬ್ರಹ್ಮಣ್ಯ ಆಚಾರ್ಯ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.