ADVERTISEMENT

ಶಿರ್ವ: ಕೊರಗ ಮಕ್ಕಳ ಶೈಕ್ಷಣಿಕ ಬೇಸಿಗೆ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 13:17 IST
Last Updated 15 ಮೇ 2025, 13:17 IST
ಪೆರ್ನಾಲಿನಲ್ಲಿ ಕೊರಗ ಮಕ್ಕಳ ಶೈಕ್ಷಣಿಕ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು
ಪೆರ್ನಾಲಿನಲ್ಲಿ ಕೊರಗ ಮಕ್ಕಳ ಶೈಕ್ಷಣಿಕ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು   

ಶಿರ್ವ: ಜಿಲ್ಲಾಡಳಿತ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಉಡುಪಿ, ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಹಾಗೂ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ - ಕೇರಳದ ಆಶ್ರಯದಲ್ಲಿ ‘ಕೊರಗ ಮಕ್ಕಳ ಶೈಕ್ಷಣಿಕ ಬೇಸಿಗೆ ಶಿಬಿರ’ವನ್ನು ಪೆರ್ನಾಲು ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ಆರಂಭಿಸಲಾಯಿತು.

ತಹಶೀಲ್ದಾರ್ ಪ್ರತಿಭಾ ಆರ್. ಅವರು, ಡೋಲು ಬಡಿದು, ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ‘ಬೇಸಿಗೆ ಶಿಬಿರಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆ ಪೂರಕವಾಗಬಲ್ಲದು’ ಎಂದರು.

ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಸಂಯೋಜಕ ಪುತ್ರನ್ ಹೆಬ್ರಿ, ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಶಿಬಿರಾರ್ಥಿಗಳ ಪ್ರತಿನಿಧಿಗಳಾಗಿ ಹರಿಣಾಕ್ಷಿ, ನಿಶಾಂತ್ ಇದ್ದರು.

ADVERTISEMENT

ಪರಿಸರ ಶಿಕ್ಷಣ ಶಿಕ್ಷಕಿ ದೀಪ್ತಿ ಮಾತನಾಡಿ, ‘ಪರಿಸರದ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಮಕ್ಕಳು ಚಿಕ್ಕವಯಸ್ಸಿನಲ್ಲೇ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು’ ಎಂದರು.

ಕೃಷ್ಣಪ್ಪ ಬಂಬಿಲ ಅವರು, ಮಕ್ಕಳಿಗೆ ನಾಯಕತ್ವ ತರಬೇತಿ ಹಾಗೂ ರಂಗ ತರಬೇತಿ ನೀಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಬಿತಾ ಗುಂಡ್ಮಿ, ಸಮುದಾಯದ ಪರಿಚಯ ಮಾಡುವುದರ ಜೊತೆಗೆ ಸಮಸ್ಯೆಗಳು ಹೇಗೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಉಮೇಶ್ ಅವರು, ಮಕ್ಕಳಿಗೆ ಸುಲಭ ವಿಧಾನದಲ್ಲಿ ಚಿತ್ರ ಬಿಡಿಸುವುದನ್ನು ಹೇಳಿಕೊಟ್ಟರು. ಶಿಬಿರಾರ್ಥಿ ವಲ್ಮ ಸ್ವಾಗತಿಸಿದರು. ಸಮುದಾಯ ಕಾರ್ಯಕರ್ತ ಸುಪ್ರಿಯಾ ಎಸ್. ಕಿನ್ನಿಗೋಳಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.