ADVERTISEMENT

ತಪ್ಪುಗಳನ್ನು ತಿದ್ದ ಹಿಂದಿನ ಪಠ್ಯಪುಸ್ತಕ ಪರಿಷ್ಕರಣ ಸಮಿತಿ

ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 13:49 IST
Last Updated 8 ಅಕ್ಟೋಬರ್ 2021, 13:49 IST
ಬಿ.ಸಿ. ನಾಗೇಶ್‌
ಬಿ.ಸಿ. ನಾಗೇಶ್‌   

ಉಡುಪಿ: ಶಾಲಾ ಪಠ್ಯ ಪುಸ್ತಕಗಳಲ್ಲಿರುವ ದೋಷಗಳನ್ನು ಸಾರ್ವಜನಿಕರು ಗಮನಿಸಿದ್ದರೆ ಹಲ್ಲೆ ಮಾಡುತ್ತಿದ್ದರು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು.

ರೋಹಿತ್ ತೀರ್ಥರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೈಬಿಡಬೇಕು ಎಂಬ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು ‘ಪಠ್ಯ ಪುಸ್ತಕಗಳಲ್ಲಿ ಬಹಳಷ್ಟು ತಪ್ಪುಗಳಿದ್ದರೂ ಹಿಂದಿನ ಪಠ್ಯ ಪರಿಷ್ಕರಣಾ ಸಮಿತಿ ತಿದ್ದುವಂತಹ ಕೆಲಸ ಮಾಡಲಿಲ್ಲ. ಪಠ್ಯದಲ್ಲಿ ವಿವೇಕಾನಂದರ ಭಾಷಣ ತಿರುಚಲಾಗಿದ್ದು, ಕುವೆಂಪು ಅವರ ಕುರಿತಾದ ಪಾಠ ಕೈಬಿಡಲಾಗಿದೆ. ಮಹರ್ಷಿ ವಾಲ್ಮೀಕಿ ಕುರಿತು ಏಕವಚನ ಬಳಸಲಾಗಿದೆ.ಅ

‌ಪಠ್ಯದಲ್ಲಿರುವ ತಪ್ಪುಗಳನ್ನು ಸರಿಪಡಿಸುವಂತೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಪಠ್ಯ ಪರಿಷ್ಕರಣಾ ಸಮಿತಿ ರಚಿಸಲಾಗಿದೆ. ದೂರುಗಳಲ್ಲಿ ಸತ್ಯಾಂಶವಿದ್ದರೆ ಪಠ್ಯದಲ್ಲಿ ಬದಲಾವಣೆ ಮಾಡಲಾಗುವುದು. ಇಲ್ಲವಾದರೆ ಇಲ್ಲ. ವೈಚಾರಿಕತೆಯಲ್ಲಿ ಮುಳುಗಿರುವವರು ಹಿಂದೆ ಮಾಡಿದ ತಪ್ಪುಗಳು ಈಗ ಹೊರಬರುತ್ತವೆ ಎಂಬ ಭಯ ಕೆಲವರನ್ನು ಕಾಡುತ್ತಿದೆ ಎಂದು ಸಚಿವರು ಟೀಕಿಸಿದರು.

ADVERTISEMENT

ಕೋವಿಡ್‌ ಪಾಸಿಟಿವಿಟಿ ದರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದಸರಾ ಮುಗಿದ ಕೂಡಲೇ 1 ರಿಂದ 5ನೇ ತರಗತಿವರೆಗೂ ಶಾಲೆಗಳನ್ನು ತೆರೆಯಲಾಗುವುದು. ದಸರಾ ನಂತರ ಬಿಸಿಯೂಟ ಕೂಡ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.