ADVERTISEMENT

ಉಡುಪಿ: ದೈತ್ಯ ತೊರಕೆ ಮೀನು ಬಲೆಗೆ

​ಪ್ರಜಾವಾಣಿ ವಾರ್ತೆ
Published 12 ಮೇ 2019, 10:03 IST
Last Updated 12 ಮೇ 2019, 10:03 IST
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಶನಿವಾರ ಒಂದು ಟನ್ ತೂಕದ ಬೃಹತ್ ತೊರಕೆ ಮೀನು ಸಿಕ್ಕಿದೆ. ಮೀನನ್ನು ಕ್ರೇನ್‌ ಮೂಲಕ ಎತ್ತಿ ಬಂದರಿಗೆ ಹಾಕಲಾಯಿತು.
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಶನಿವಾರ ಒಂದು ಟನ್ ತೂಕದ ಬೃಹತ್ ತೊರಕೆ ಮೀನು ಸಿಕ್ಕಿದೆ. ಮೀನನ್ನು ಕ್ರೇನ್‌ ಮೂಲಕ ಎತ್ತಿ ಬಂದರಿಗೆ ಹಾಕಲಾಯಿತು.   

ಉಡುಪಿ: ಸಮುದ್ರದಲ್ಲಿ ಮೀನುಗಾರರ ಬಲೆಗೆ ದೈತ್ಯ ತೊರಕೆ ಜಾತಿಯ ಮೀನು ಬಿದ್ದಿದೆ. ಮೀನು ಸುಮಾರು 1 ಟನ್‌ಗೂ ಹೆಚ್ಚಿನ ತೂಕ ಇದೆ ಎನ್ನಲಾಗಿದೆ.

ಈಚೆಗೆ ಮಿಥುನ್ ಕುಂದರ್ ಮಾಲೀಕತ್ವದ ದಿವ್ಯಾಂಶಿ ಹೆಸರಿನ ಬೋಟು ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಮೀನುಗಾರರು ಬೀಸಿದ ಬಲೆಗೆ ದೊಡ್ಡ ತೊರಕೆ ಮೀನು ಬಿದ್ದಿದೆ. ಅಪರೂಪಕ್ಕೊಮ್ಮೆ ಬೃಹತ್ ಗಾತ್ರದ ಮೀನುಗಳು ಬಲೆಗೆ ಸಿಲುಕುತ್ತವೆ ಎಂದು ಮೀನುಗಾರರು ತಿಳಿಸಿದ್ದಾರೆ.

ದೈತ್ಯ ಮೀನನ್ನು ಬೋಟಿನಿಂದ ದಡಕ್ಕೆ ಎಳೆಯಲು ಹರಸಾಹಸ ಪಡಬೇಕಾಯಿತು. ಕೊನೆಗೆ ಕ್ರೇನ್ ಸಹಾಯದಿಂದ ಎತ್ತಿ ಮಲ್ಪೆ ಬಂದರಿಗೆ ಹಾಕಲಾಯಿತು. ಗಜಗಾತ್ರದ ಮೀನು ನೋಡಲು ಬಂದರಿನಲ್ಲಿ ಹೆಚ್ಚು ಜನರು ಸೇರಿದ್ದರು.ಮೀನಿನ ಬೆಲೆ ಅಂದಾಜು ₹ 60,000 ಇರಬಹುದು ಎನ್ನಲಾಗಿದೆ.ಮೀನನ್ನು ಉಡುಪಿ ಮಾರುಕಟ್ಟೆಗೆ ಸಾಗಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.